ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಉಭಯ ತಂಡಗಳ ಟೆಸ್ಟ್ ಕಾದಾಟದ ಅಂಕಿ ಅಂಶಗಳ ವಿವರ ಇಲ್ಲಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅತ್ಯುತ್ತಮ ಬೌಲಿಂಗ್ ಸರಾಸರಿ ಹೊಂದಿದ ಬೌಲರ್ಗಳ ವಿವರ ಇಲ್ಲಿದೆ. ಈ ಎಲ್ಲಾ ಬೌಲರ್ಗಳು ಕಡಿಮೆ ಎಂದರೆ 30 ವಿಕೆಟ್ ಗಳನ್ನು ಪಡೆದು ಮಿಂಚಿದ್ದಾರೆ.
ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ವೇಗಿ ಗ್ಲೇನ್ ಮೆಕ್ ಗ್ರೆತ್ 51 ವಿಕೆಟ್ ಪಡೆದಿದ್ದು 18.64 ಸರಾಸರಿ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.

ಟೀಮ್ ಇಂಡಿಯಾದ ಆಲ್ರೌಂಡರ್ ಜಡೇಜಾ 63 ವಿಕೆಟ್ ಪಡೆದು 18.85 ಸರಾಸರಿ ಹೊಂದಿದ್ದಾರೆ.
ಭಾರತದ ವೇಗಿ ಜಸ್ಪ್ರೀತ್ ಬುಮ್ರಾ 32 ವಿಕೆಟ್ ಪಡೆದು 21.25 ಸರಾಸರಿ ಹೊಂದಿದ್ದಾರೆ.ಬೆನ್ ಹಿಲ್ಫಾಹಾಸ್ 33 ವಿಕೆಟ್ ಪಡೆದು 22 ಸರಾಸರಿ ಹೊಂದಿದ್ದಾರೆ.ಪ್ಯಾಟ್ ಕಮಿನ್ಸ್ 43 ವಿಕೆಟ್ ಪಡೆದು 24.46 ಸರಾಸರಿ ಹೊಂದಿದ್ದಾರೆ.ವೇಗಿ ಜೇಸನ್ ಗಿಲ್ಲಸ್ಪಿ 43 ವಿಕೆಟ್ ಪಡೆದು 25.44 ಸರಾಸರಿ ಹೊಂದಿದ್ದಾರೆ.