ಬಾರ್ಡರ್ –ಗವಾಸ್ಕರ್ ಟ್ರೋಫಿ ಇತಿಹಾಸದಲ್ಲಿ ಇದುವರೆಗೂ ಇಬ್ಬರು ಬ್ಯಾಟರ್ಗಳು ಮಾತ್ರ ಎರಡನೆ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದಾರೆ. ರನ್ ಮಷೀನ್ ವಿರಾಟ್ ಕೊಹ್ಲಿ 2014ರಲ್ಲಿ ಶತಕ ಸಿಡಿಸಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.
ಎರಡನೆ ಇನ್ನಿಂಗ್ಸ್ ಶತಕ ಸಿಡಿಸಿದವರು ಯಾರು ? ಯಾರು ಶತಕ ವಂಚಿತರು ಎನ್ನುವ ವಿವರ ಇಲ್ಲಿದೆ.
2014ರಲ್ಲಿ ವಿರಾಟ್ ಕೊಹ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಅಡಿಲೇಡ್ ಮೈದಾನದಲ್ಲಿ 141 ರನ್ ಹೊಡೆದು ಮಿಂಚಿದ್ದರು.
ಮಾಜಿ ನಾಯಕ ಮಾರ್ಕ್ ಟೇಲರ್ 1998ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ 102 ರನ್ ಹೊಡದಿದ್ದರು.
2014ರಲ್ಲಿ ಮುರಳಿ ವಿಜಯ್ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ 99 ರನ್ ಹೊಡೆದು ಶತಕ ವಂಚಿತರಾಗಿದ್ದರು.

2021ರಲ್ಲಿ ರಿಷಭ್ ಪಂತ್ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ 97 ರನ್ ಹೊಡೆದಿದ್ದರು. ಕೇವಲ 3 ರನ್ಗಳ ಅಂತರದಿಂದ ಶತಕ ವಂಚಿತರಾಗಿದ್ದರು.
2021ರಲ್ಲಿ ಯುವ ಡ್ಯಾಶಿಂಗ್ ಓನರ್ ಶುಭಮನ್ ಗಿಲ್ ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ 91 ರನ್ ಹೊಡೆದಿದ್ದರು. 9 ರನ್ ಗಳ ಅಂತರದಲ್ಲಿ ಶತಕ ವಂಚಿತರಾಗಿದ್ದರು.