INDIAvsZIMBABWE ಐಸಿಸಿ ಟಿ20 ವಿಶ್ವಕಪ್ನ ಸೂಪರ್ 12ರ ಹಂತ ರೋಚಕ ಘಟ್ಟ ತಲುಪಿದೆ. ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದ ನಂತರ ಯಾವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ ಎಂಬುದು ತಿಳಿಯಲಿದೆ.
ರೋಹಿತ್ ಪಡೆಯ ಭವಿಷ್ಯ ಈ ಪಂದ್ಯದಲ್ಲಿ ನಿರ್ಧಾರವಾಗಲಿದೆ. ಗ್ರೂಪ್ 2 ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ 4 ಪಂದ್ಯಗಳಿಂದ 3 ಪಂದ್ಯಗಳಲ್ಲಿ ಗೆದ್ದು 1ರಲ್ಲಿ ಸೋತು ಒಟ್ಟು 6 ಅಂಕಗಳೊಂದಿಗೆ 0.730 ನೆಟ್ ರನ್ ರೇಟ್ ಹೊಂದಿದೆ.
ಐತಿಹಾಸಿಕ ಎಂಸಿಜೆ ಮೈದಾನದಲ್ಲಿ ನಡೆಯುವ ಪಂದ್ಯವನ್ನು ಭಾರತ ಲಘುವಾಗಿ ಪರಿಗಣಿಸುವಂತಿಲ್ಲ. ಹೀಗಾಗಿ ಇದು ರೋಹಿತ್ ಪಡೆಗೆ ಡು ಆರ್ ಡೈ ಮ್ಯಾಚ್ ಆಗಿದೆ.
ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಟೀಮ್ ಇಂಡಿಯಾದ ಭವಿಷ್ಯಾವೇನು ಎಂಬುದು ಕೂಡ ಮುಖ್ಯವಾಗುತ್ತದೆ.
ಹವಾಮಾನ ವರದಿ ಪ್ರಕಾರ ಭಾರತ –ಜಿಂಬಾಬ್ವೆ ನಡುವಿನ ಪಂದ್ಯದ ವೇಳೆ ಮಳೆಯಾಗುವುದಿಲ್ಲ ಎಂದು ತಿಳಿದು ಬಂದಿದೆ. ಒಂದು ವೇಳೆ ಟಾಸ್ ಕೂಡ ಹಾಕದೆ ಮಳೆ ಬಂದು ರದ್ದಾದರೆ ಎರಡೂ ತಂಡಗಳು ಅಂಕಗಳನ್ನು ಹಂಚಿಕೊಳ್ಳಲಿವೆ. 6 ಅಂಕ ಪಡೆದಿರುವ ಭಾರತ ಸೆಮಿಫೈನಲ್ ಪ್ರವೇಶಿಸಲಿದೆ. ಸೋತರೆ ಮಾತ್ರ ಸಮಸ್ಯೆ ಸೃಷ್ಟಿಯಾಗುತ್ತದೆ.
ಜಿಂಬಾಬ್ವೆ ವಿರುದ್ಧ ಎಚ್ಚರಿಯಿಂದ ಆಡಬೇಕಾಗಿದ್ದು ಭಾರತ ಗೆಲ್ಲುವ ನೆಚ್ಚಿನ ತಂಡವಾಗಿದೆ.