ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮತ್ತೆ ಸೋಲು ಕಂಡಿದೆ. ನ್ಯೂಜಿಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯವನ್ನೂ ಸೋತ ಮಹಿಳಾ ತಂಡ ಏಕದಿನ ಸರಣಿಯಲ್ಲಿ 4-0 ಹಿನ್ನಡೆ ಕಂಡಿದೆ. ಅಷ್ಟೇ ಅಲ್ಲ ಕ್ಲೀನ್ ಸ್ವೀಪ್ ಭೀತಿಯಲ್ಲಿದೆ.
ಮಳೆಯಿಂದ 20 ಓವರುಗಳಿಗೆ ಪಂದ್ಯ ಕಡಿತಗೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 5 ವಿಕೆಟ್ ಕಳೆದುಕೊಂಡು191 ರನ್ಗಳಿಸಿತು. ಕಿವೀಸ್ ಇನ್ನಿಂಗ್ಸ್ನಲ್ಲಿ ಸೋಫಿ ಡಿವೈನ್ (32), ಸೂಝಿ ಬೇಟ್ಸ್ (41) ಅಮೇಲಿಯ ಕೆರ್ ಅಜೇಯ 61 ಮತ್ತು ಆಮಿ ಸೆಟರ್ವೇಟ್ 32 ರನ್ಗಳಿಸಿ ಮಿಂಚಿದರು.
ಚೇಸಿಂಗ್ ಆರಂಭಿಸಿದ ಭಾರತ ಪಟಪಟನೆ ವಿಕೆಟ್ ಕಳೆದುಕೊಂಡಿತು. ಸ್ಮೃತಿ ಮಂಧಾನ (13(, ಮಿಥಾಲಿ ರಾಜ್ (30) ಮತ್ತು ರಿಚಾ ಘೋಷ್ (52) ಮಾತ್ರ ಎರಡಂಕಿ ತಲುಪಿದರು. ಶಫಾಲಿ ವರ್ಮಾ, ಯಸ್ತಿಕಾ ಭಾಟಿಯಾ, ಮೇಘನಾ ಸಿಂಗ್ ಮತ್ತು ರೇಣುಕಾ ಸಿಂಗ್ ಶೂನ್ಯ ಸುತ್ತಿದರು. ಭಾರತ 17.5 ಓವರುಗಳಲ್ಲಿ 128 ರನ್ಗಳಿಗೆ ಆಲೌಟ್ ಆಗಿ 63 ರನ್ಗಳಿಂದ ಪಂದ್ಯ ಸೋತಿತು.