ಮುಂದಿನ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಕಳೆದ ಬಾರಿ ಯುಎಇನಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಕಳಪೆ ಪ್ರದರ್ಶನ ನೀಡಿ ಲೀಗ್ ಹಂತದಿಂದಲೇ ಹೊರ ಬಿದ್ದಿತ್ತು. ಆದರೆ ಆಸ್ಟ್ರೇಲಿಯಾದಲ್ಲಿ ನಡೆಯುವ ಟೂರ್ನಿ ಗೆಲ್ಲಲು ಈಗಲೇ ಪ್ರಿಪರೇಷನ್ ನಡೆಯುತ್ತಿದೆ. ಟೀಮ್ ಕಾಂಬಿನೇಷನ್ ಸರಿಪಡಿಸುವ ಪ್ಲಾನ್ ನಡೆಯುತ್ತಿದೆ.
ನ್ಯೂಜಿಲೆಂಡ್, ವೆಸ್ಟ್ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ತವರಿನ ಸರಣಿ ಬಳಿಕ ಟೀಮ್ ಇಂಡಿಯಾದ ಒಂದು ಸಮಸ್ಯೆ ಬಗೆಹರಿದಂತೆ ಕಾಣುತ್ತದೆ. ಆಸ್ಟ್ರೇಲಿಯಾದ ಪಿಚ್ಗಳು ವೇಗ ಹಾಗೂ ಬೌನ್ಸ್ ಹೊಂದಿರಲಿವೆ. ಹೀಗಾಗಿ ಮಧ್ಯಮ ವೇಗದ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಮಾಡಬಲ್ಲ ಆಲ್ರೌಂಡರ್ ಹುಡುಕಾಟದಲ್ಲಿತ್ತು ಭಾರತ. ಹಾರ್ದಿಕ್ ಪಾಂಡ್ಯ ಒಬ್ಬರೇ ಈ ಸ್ಥಾನದ ಆಕಾಂಕ್ಷಿಯಾಗಿದ್ದರು.
ಹಾರ್ದಿಕ್ ಪಾಂಡ್ಯ ಕೆಲ ವರ್ಷಗಳಿಂಧ ಬೌಲಿಂಗ್ ಮಾಡುತ್ತಿಲ್ಲ. ಜೊತೆಗೆ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರವೂ ಇದ್ದಾರೆ. ಹೀಗಾಗಿ ಭಾರತ ಬೇರೊಬ್ಬ ಮೀಡಿಯಂ ಪೇಸ್ ಬೌಲಿಂಗ್ ಮಾಡಬಲ್ಲ ಆಲ್ರೌಂಡರ್ ಹುಡುಕಾಟದಲ್ಲಿತ್ತು. ಈಗ ವೆಂಕಟೇಶ್ ಅಯ್ಯರ್ ಹಾರ್ದಿಕ್ ಪಾಂಡ್ಯಾ ಜಾಗಕ್ಕೆ ರಿಪ್ಲೇಸ್ಮೆಂಟ್ ರೀತಿಯಲ್ಲಿ ಕಾಣುತ್ತಿದ್ದಾರೆ. ಆಸ್ಟ್ರೇಲಿಯಾ ವಿಮಾನ ಹತ್ತಲು ಬಹುತೇಕ ಸಜ್ಜಾಗಿದ್ದಾರೆ.
ವೆಂಕಟೇಶ್ ಅಯ್ಯರ್ ಟೀಮ್ ಇಂಡಿಯಾಕ್ಕೆ ಫ್ಲೆಕ್ಸಿಬಿಲಿಟಿ ತಂದುಕೊಡುತ್ತಿದ್ದಾರೆ. ಎಡಗೈ ಬ್ಯಾಟ್ಸ್ಮನ್ ಆಗಿರುವ ಅಯ್ಯರ್ ಓಪನರ್ ಕೂಡ ಹೌದು. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಕೊಟ್ಟ ಫಿನಿಷರ್ ರೋಲ್ ಅನ್ನು ಕೂಡ ಸಮರ್ಥವಾಗಿ ನಿಭಾಯಿಸಿದ್ದಾರೆ.ಬೌಲಿಂಗ್ನಲ್ಲೂ ಪರಿಣಾಮಕಾರಿ ಪ್ರದರ್ಶನ ನೀಡಿದ್ದಾರೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ ಮುಂದಿನ ಟಿ20 ಸಮಯದ ವೇಳೆ ಅಯ್ಯರ್ ಫಿಟ್ ಆಗಿದ್ದರೆ, ಹಾರ್ದಿಕ್ ಪಾಂಡ್ಯಾಗೆ ಅವಕಾಶ ಮಿಸ್ ಆಗುವುದು ಖಚಿತ. ಒಟ್ಟಿನಲ್ಲಿ ಟೀಮ್ ಇಂಡಿಯಾದಲ್ಲಿ ಹಲವು ಬದಲಾವಣೆಗಳು ನಡೆಯುತ್ತಿವೆ ಅನ್ನುವುದು ಸುಳ್ಳಲ್ಲ.