ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಈಗ ಅಜೇಯ ತಂಡವಾಗಿ ಮುನ್ನಡೆಯುತ್ತಿದೆ. ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದೇ ಕೊನೆ. ಅಲ್ಲಿಂದ ಮುಂದೆ ಟೀಮ್ ಇಂಡಿಯಾ ಚುಟುಕು ಕ್ರಿಕೆಟ್ನಲ್ಲಿ ಸೋತೇ ಇಲ್ಲ. ಅಷ್ಟೇ ಅಲ್ಲ ಹೊಸ ದಾಖಲೆಯತ್ತ ಕಣ್ಣಿಟ್ಟಿದೆ.
ಟಿ20 ಪಂದ್ಯಗಳಲ್ಲಿ ಸತತ 12 ಪಂದ್ಯ ಗೆದ್ದಿರುವ ಅಫ್ಘಾನಿಸ್ತಾನ ವಿಶ್ವದಾಖಲೆಯ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ರೊಮೆನಿಯಾ ಕೂಡ ಸತತ 12 ಪಂದ್ಯಗಳನ್ನು ಗೆದ್ದಿದೆ.
ಸತತ 11 ಪಂದ್ಯಗಳನ್ನು ಗೆದ್ದಿರುವ ಅಫ್ಘಾನಿಸ್ತಾನ ಮತ್ತು ಉಗಾಂಡ 2ನೇ ಸ್ಥಾನವನ್ನು ಹಂಚಿಕೊಂಡಿವೆ
ಶ್ರೀಲಂಕಾ ವಿರುದ್ಧ ಮೊದಲ ಪಂದ್ಯ ಗೆದ್ದು ಟಿ20 ಅಜೇಯ ದಾಖಲೆಯನ್ನು 10 ಪಂದ್ಯಗಳಿಗೆ ವಿಸ್ತರಿಸಿಕೊಂಡಿದೆ.
ಟೀಮ್ ಇಂಡಿಯಾ ಟಿ20 ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ,ನಮೀಬಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧ ಜಯಗಳಿಸಿತ್ತು.
ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ 3 ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿತ್ತು.
ವೆಸ್ಟ್ಇಂಡೀಸ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲೂ ಭಾರತ 3-0ಯಿಂದ ಗೆದ್ದಿತ್ತು.
ಶ್ರೀಲಂಕಾ ವಿರುದ್ಧ ಕೊನೆಯ ಎರಡು ಪಂದ್ಯಗಳನ್ನು ಗೆದ್ದರೆ ಅಫ್ಘಾನಿಸ್ತಾನ ನಿರ್ಮಿಸಿರುವ ದಾಖಲೆಗೆ ಸಮನಾಗಿ ನಿಲ್ಲಲಿದೆ.