ತವರಿನಲ್ಲಿ 3 ಟೆಸ್ಟ್ ಆಡುವ ತಂಡಗಳಿಗೆ ವೈಟ್ ವಾಷ್ ಬಳಿದ ಭಾರತ ಟಿ20 ಕ್ರಿಕೆಟ್ನ ನಂಬರ್ ವನ್ತಂಡ. ಮೊದಲಿಗೆ ನ್ಯೂಜಿಲೆಂಡ್ ತಂಡವನ್ನು ಬಗ್ಗು ಬಡಿದಿದ್ದ ಭಾರತ ನಂತರ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಂಡಕ್ಕೂ ಅದೇ ಪಾಠ ಕಲಿಸಿದೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಸತತ 12 ಗೆಲುವು ದಾಖಲಿಸಿ ವಿಶ್ವ ದಾಖಲೆಯನ್ನು ಸರಿಗಟ್ಟಿದೆ.
ಟೆಸ್ಟ್ ಆಡುವ ರಾಷ್ಟ್ರಗಳ ಪೈಕಿ ಅಫ್ಘಾನಿಸ್ತಾನ ಸತತ 12 ಪಂದ್ಯ ಗೆದ್ದಿತ್ತು. ಫೆಬ್ರವರಿ 2018 ರಿಂದ ಸೆಪ್ಟಂಬರ್ 2019ರ ನಡುವೆ ಅಫ್ಘಾನ್ ಸೋಲಿಲ್ಲದ ತಂಡವಾಗಿತ್ತು. ಭಾರತ ಈಗ ನವೆಂಬರ್ 2012 ರಿಂದ ಫೆಬ್ರವರಿ 2022ರ ನಡುವೆ ಈ ದಾಖಲೆ ಬರೆದಿದೆ. ಟೆಸ್ಟ್ ಆಡುವ ದೇಶಗಳ ಪೈಕಿ ಅಫ್ಘಾನ್ ಮಾರ್ಚ್ 2016 ರಿಂದ ಮಾರ್ಚ್ 2017ರ ನಡುವೆ 11 ಪಂದ್ಯ ಗೆದ್ದು ವಿಶ್ವ ದಾಖಲೆ ಬರೆದಿತ್ತು.
ಪಾಕಿಸ್ತಾನ 9, ಇಂಗ್ಲೆಂಡ್ 8, ಐರ್ಲೆಂಡ್ 8 ಪಂದ್ಯ ಗಳನ್ನು ಗೆದ್ದಿದ್ದು ಟೆಸ್ಟ್ ಆಡುವ ದೇಶಗಳ ಸತತ ಟಿ20 ಜಯದ ದಾಖಲೆ ದಾಖಲೆ ಆಗಿತ್ತು.
ಈ ಹಿಂದೆ ಭಾರತ ಡಿಸೆಂಬರ್ 2012 ಮತ್ತು ಏಪ್ರಿಲ್ 2014ರ ನಡುವೆ ಸತತ 7 ಪಂದ್ಯಗಳನ್ನು ಗೆದ್ದಿದ್ದೇ ಅತೀ ಹೆಚ್ಚಿನ ಅಜೇಯ ದಾಖಲೆ ಆಗಿತ್ತು.
ಅಸೋಸಿಯೇಟ್ ರಾಷ್ಟ್ರಗಳ ಪೈಕಿ ರೊಮೇನಿಯಾ 12 ಪಂದ್ಯಗಳ ಅಜೇಯ ದಾಖಲೆ ಬರೆದಿತ್ತು. ರೊಮೇನಿಯಾ ಭಾರತ ಮತ್ತು ಅಫ್ಘಾನಿಸ್ತಾನದ ಸಾಲಿನಲ್ಲಿದೆ.
ಸತತ 11 ಪಂದ್ಯಗಳನ್ನು ಗೆದ್ದಿದ್ದ ಉಗಾಂಡ ಅಸೋಸಿಯೇಟ್ ರಾಷ್ಟ್ರಗಳ ಪೈಕಿ ಅತೀ ಹೆಚ್ಚು ಸತತ ಗೆಲುವು ಕಂಡ 2ನೇ ತಂಡವಾಗಿದೆ.
ಟೀಮ್ ಇಂಡಿಯಾ ಟಿ20 ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ,ನಮೀಬಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧ ಜಯಗಳಿಸಿತ್ತು. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ 3 ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿತ್ತು. ವೆಸ್ಟ್ಇಂಡೀಸ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲೂ ಭಾರತ 3-0ಯಿಂದ ಗೆದ್ದಿತ್ತು. ಶ್ರೀಲಂಕಾ ವಿರುದ್ಧವೂ ಸತತ 3 ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿದೆ.