ಒಂದು ಕಡೆ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಯನ್ನಾಡುತ್ತಿದೆ. ಮತ್ತೊಂದು ಕಡೆಯಲ್ಲಿ ಇಂಗ್ಲೆಂಡ್ ಪ್ರವಾಸಕ್ಕಾಗಿ ಮುಂಬೈನಿಂದ ವಿಮಾನವೇರಿದೆ. ಹೌದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧವಾಗುವ ಉದ್ದೇಶದಿಂದ ಟೀಮ್ ಇಂಡಿಯಾ ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಿಂದ ಯುಕೆಗೆ ಪ್ರಯಾಣಿಸಿದೆ.
ಮಾಜಿ ನಾಯಕ ವಿರಾಟ್ ಕೊಹ್ಲಿ, ಆಲ್ರೌಂಡರ್ಗಳಾ ಶಾರ್ಧೂಲ್ ಥಾಕೂರ್, ರವೀಂದ್ರ ಜಡೇಜಾ, ಓಪನರ್ ಶುಭ್ಮನ್ ಗಿಲ್ ಮತ್ತು ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಸೇರಿದಂತೆ ಹಲವು ಆಟಗಾರರು ಇಂಗ್ಲೆಂಡ್ ವಿಮಾನವೇರಿದ್ದಾರೆ. ಚೇತೇಶ್ವರ ಪೂಜಾರಾ ಮತ್ತು ಮೊಹಮ್ಮದ್ ಶಮಿ ಕೂಡ ಇಂಗ್ಲೆಂಡ್ಗೆ ಹಾರಿದ್ದಾರೆ.
ಇಂಗ್ಲೆಂಡ್ನಲ್ಲಿ ಟೀಮ್ ಇಂಡಿಯಾ 1 ಟೆಸ್ಟ್ ಪಂದ್ಯ, 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ. ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡುತ್ತಿರುವ ಕೆಲ ಆಟಗಾರರು ಶೀಘ್ರದಲ್ಲೇ ತಂಡ ಸೇರಿಕೊಳ್ಳಲಿದ್ದಾರೆ. ನಾಯಕ ರೋಹಿತ್ ಶರ್ಮಾ ನೇರವಾಗಿ ಇಂಗ್ಲೆಂಡ್ಗೆ ಆಗಮಿಸಲಿದ್ದಾರೆ ಅನ್ನುವ ಮಾಹಿತಿ ಇದೆ.
ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ 6 ಪಂದ್ಯಗಳ ಟೆಸ್ಟ್ ಸರಣಿ ಆಡಬೇಕಿತ್ತು. ಆದರೆ ಕಳೆದ ಬಾರಿ ಆಡಿದಾಗ ಐಪಿಎಲ್ ಕಾರಣದಿಂದ 1 ಪಂದ್ಯವನ್ನು ಬಾಕಿ ಉಳಿಸಿಕೊಂಡಿತ್ತು. ಈಗ ಅದನ್ನು ಆಡಿ, ಜೊತೆಗೆ ನಿಗದಿತ ಓವರುಗಳ ಪಂದ್ಯವನ್ನು ಕೂಡ ಆಡಲಿದೆ. ಒಟ್ಟಿನಲ್ಲಿ ಟೀಮ್ ಇಡಿಯಾದ ಬ್ಯೂಸಿ ಶೆಡ್ಯೂಲ್ಗೆ ಮುಹೂರ್ತ ಫಿಕ್ಸ್ ಆಗಿದೆ.