Ind VS WI T20: ಎರಡನೇ ಪಂದ್ಯದಲ್ಲೇ ಸರಣಿ ಗೆಲ್ಲಲು ಟೀಮ್​​ ಇಂಡಿಯಾ ಪ್ಲಾನ್​​, ತಿರುಗಿ ಬೀಳುತ್ತಾ ಕೆರಿಬಿಯನ್​​​​​ ಟೀಮ್​​..?

ಮೊದಲ ಟಿ20 ಪಂದ್ಯವನ್ನು ಗೆದ್ದ ಟೀಮ್​​ ಇಂಡಿಯಾ 2ನೇ ಟಿ20 ಪಂದ್ಯವನ್ನೂ ಗೆದ್ದು ಸರಣಿ ಗೆಲ್ಲುವ ಉತ್ಸಾಹದಲ್ಲಿದೆ. ಇನ್ನೊಂದೆಡೆ ಏಕದಿನ ಸರಣಿಯಲ್ಲಿ ವೈಟ್​ವಾಷ್​​ ಅವಮಾನ ಎದುರಿಸಿದ್ದ ವೆಸ್ಟ್​​ಇಂಡೀಸ್​​ ಟಿ20 ಸರಣಿಯನ್ನಾದರೂ ಗೆಲ್ಲಬೇಕು ಅನ್ನುವ ಲೆಕ್ಕಾಚಾರದಲ್ಲಿದೆ. ಎರಡನೇ ಪಂದ್ಯವನ್ನು ಗೆದ್ದು ಸರಣಿ ಸಮಬಲ ಸಾಧಿಸುವ ಲೆಕ್ಕಾಚಾರ ಕೆರಿಬಿಯನ್ನರದ್ದು.

ಟೀಮ್​​ ಇಂಡಿಯಾದಲ್ಲಿ ಹೆಚ್ಚು ಬದಲಾವಣೆ ಕಷ್ಟ. ರೋಹಿತ್​​, ಕಿಶನ್​​, ವಿರಾಟ್​​ ಟಾಪ್​​ ಆರ್ಡರ್​​ ಟ್ರಂಪ್​​​ ಕಾರ್ಡ್​ಗಳು. ರಿಷಬ್​​ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇರುವುದರಿಂದ ಶ್ರೇಯಸ್​​ ಅಯ್ಯರ್​​ ತಂಡ ಸೇರಿಕೊಳ್ಳಬಹುದು. ಸೂರ್ಯ ಕುಮಾರ್​​​ ಸ್ಥಾನ ಗ್ಯಾರೆಂಟಿ. ಬ್ಯಾಟಿಂಗ್​​ ಆಲ್​​ರೌಂಡರ್ ​ಕೋಟಾದಲ್ಲಿ ವೆಂಕಟೇಶ್​ ಅಯ್ಯರ್​​ ಆಡುತ್ತಾರೆ.

ಬೌಲಿಂಗ್​​ ಆಲ್​​ರೌಂಡರ್​ ಕೋಟಾದಲ್ಲಿ ಸ್ಥಾನ ಪಡೆದಿದ್ದ ದೀಪಕ್​​ ಚಹರ್​​ ಗಾಯಗೊಂಡಿದ್ದಾರೆ. ಹೀಗಾಗಿ ಶಾರ್ದೂಲ್​​ ಥಾಕೂರ್​​ ಎಂಟ್ರಿ ಆಗಬಹುದು. ಹರ್ಷಲ್​​ ಪಟೇಲ್​​ ಡೆತ್​​​ ಬೌಲಿಂಗ್​​ ಸ್ಪೆಷಲಿಸ್ಟ್​​. ಭುವನೇಶ್ವರ್​​ ಕುಮಾರ್​​ ಮತ್ತು ಸಿರಾಜ್​​ ನಡುವೆ ಸ್ಥಾನಕ್ಕಾಗಿ ಫೈಟ್​​ ನಡೆಯುತ್ತಿದೆ. ರವಿ ಬಿಷ್ಣೋಯಿ ಮತ್ತು ಯಜುವೇಂದ್ರ ಚಹಲ್​​ ಸ್ಪಿನ್​​ ವಿಭಾಗದ ಅಸ್ತ್ರಗಳು.

ವೆಸ್ಟ್​​ಇಂಡೀಸ್​​ ತಂಡವೂ ಸೂಪರ್​ ಆಗಿದೆ. ಕೈಲ್​​ ಮೇಯರ್ಸ್​ ಕ್ರಿಸ್​​ ಗೇಲ್​​ ಆಟವನ್ನು ನೆನಪಿಸುತ್ತಿದ್ದಾರೆ. ಬ್ರೆಂಡನ್​​ ಕಿಂಗ್​​ ಮತ್ತು ರೋಸ್ಟನ್​​ ಚೇಸ್​​  ಈ ಪಂದ್ಯದಲ್ಲಿ ಮಿಂಚಲೇಬೇಕು. ನಿಕೊಲಸ್​​ ಪೂರನ್​​, ಕೈರಾನ್​​ ಪೊಲ್ಲಾರ್ಡ್, ರೊಮ್ವಾನ್​​ ಪೊವಲ್​​, ರೊಮೊರಿಯೋ ಶೆಪರ್ಡ್ ಹೀಗೆ ವಿಂಡೀಸ್​​ ತಂಡದಲ್ಲಿ ಸಿಕ್ಸ್​​ ಹಿಟ್ಟರ್​​ಗಳ ದಂಡೇ ಇದೆ.

ಫೆಬಿಯನ್​​ ಅಲೆನ್​​ ಬದಲು ಹೈಡನ್​​ ವಾಲ್ಶ್​ ತಂಡ ಸೇರಿಕೊಳ್ಳಬಹುದು. ಅಕಿಲ್​​ ಹುಸೈನ್​​​, ಶೆಲ್ಡನ್​​ ಕಾಟ್ರೆಲ್​​​ ಮಾತ್ರ ಸ್ಪೆಷಲಿಸ್ಟ್​​ ಬೌಲರ್​​ಗಳು.

ಕೊಲ್ಕತ್ತಾದ ಈಡನ್​​ ಗಾರ್ಡನ್​​ ಪಿಚ್​​​ ಬ್ಯಾಟಿಂಗ್​ ಸ್ನೇಹಿ. ಮಂಜು ಫಲಿತಾಂಶದ ಮೇಲೆ ಪರಿಣಾಮ ಬೀರುವುದರಿಂದ ಟಾಸ್​​ ಮೇಲೆ ಎರಡೂ ತಂಡಗಳು ಗಮನ ಇಟ್ಟಿವೆ. ಮೂರನೇ ಹಾಗೂ ಅಂತಿಮ ಪಂದ್ಯದ ರೋಚಕತೆ ಈ ಪಂದ್ಯದ ಫಲಿತಾಂಶದಲ್ಲೇ ನಿರ್ಧಾರವಾಗಲಿದೆ.