India vs Sri Lanka, 1st Test – ರಾಕಿಂಗ್ ಸ್ಟಾರ್ ಜಡ್ಡು ಸ್ಪಿನ್ ಮೋಡಿಗೆ ಲಂಕಾ ನಿರುತ್ತರ..!
ಮೊಹಾಲಿ ಟೆಸ್ಟ್ ಪಂದ್ಯ ಮೂರೇ ದಿನದಲ್ಲಿ ಮುಗಿದೋಗಿದೆ. ಟೀಮ್ ಇಂಡಿಯಾ ಇನಿಂಗ್ಸ್ ಮತ್ತು 222 ರನ್ ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಬಳಗ 1-0ಯಿಂದ ಮುನ್ನಡೆಪಡೆದುಕೊಂಡಿದೆ.
ರಾಕಿಂಗ್ ಸ್ಟಾರ್ ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಅವರ ಸ್ಪಿನ್ ತಾಳಕ್ಕೆ ಲಂಕಾ ಬ್ಯಾಟ್ಸ್ ಮೆನ್ ಗಳು ಲಯವನ್ನೇ ಕಳೆದುಕೊಂಡ್ರು. ಪರಿಣಾಮ ಫಾಲೋ ಆನ್ ಗೆ ಸಿಲುಕಿದ್ದ ಶ್ರೀಲಂಕಾ ತಂಡ ಎರಡನೇ ಇನಿಂಗ್ಸ್ ನಲ್ಲಿ 178 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಹೀನಾಯವಾಗಿ ಸೋಲು ಅನುಭವಿಸಿದೆ.
ಶ್ರೀಲಂಕಾ ಪರ ಆರಂಭಿಕ ಹಾಗೂ ನಾಯಕ ದಿಮುತ್ ಕರುಣರತ್ನೆ 27 ರನ್, ಆಂಜಲೊ ಮ್ಯಾಥ್ಯೂಸ್ 28 ರನ್, ಧನಂಜಯ್ ಡಿಸಿಲ್ವಾ 30 ರನ್, ಚರಿತ್ ಅಸಲಾಂಕ 20 ರನ್ ಹಾಗೂ ನಿರೋಶಾನ್ ಡಕ್ ವೆಲ್ಲಾ ಅಜೇಯ 51 ರನ್ ಗಳಿಸಿದ್ರು.ಇನ್ನುಳಿದ ಬ್ಯಾಟ್ಸ್ ಮೆನ್ ಗಳು ಒಂದಂಕಿ ಮೊತ್ತಕ್ಕೆ ಸೀಮಿತವಾದ್ರು.
ದ್ವಿ ಶತಕದತ್ತ ದಾಪುಗಾಲು ಹಾಕುತ್ತಿದ್ದ ರವೀಂದ್ರ ಜಡೇಜಾ ಪಿಚ್ ನ ವರ್ಮವನ್ನು ಅರಿತುಕೊಂಡು ನಾಯಕ ರೋಹಿತ್ ಶರ್ಮಾ ಅವರಿಗೆ ಇನಿಂಗ್ಸ್ ಡಿಕ್ಲೇರ್ ಮಾಡುವಂತೆ ಸಂದೇಶ ರವಾನಿಸಿದ್ರು. ಹೀಗಾಗಿ ರವೀಂದ್ರ ಜಡೇಜಾ ಅಜೇಯ 175 ರನ್ ಗಳಿಸಿದ್ದಾಗ ನಾಯಕ ರೋಹಿತ್ ಶರ್ಮಾ ಇನಿಂಗ್ಸ್ ಡಿಕ್ಲೇರ್ ಮಾಡಿದ್ದರು. ಆಗ ಭಾರತದ ಮೊತ್ತ 8 ವಿಕೆಟ್ ಗೆ 574 ರನ್. India vs Sri Lanka, 1st Test – India won by an innings and 222 runs
ಕಠಿಣ ಸವಾಲನ್ನು ಬೆನ್ನಟ್ಟಿದ್ದ ಶ್ರೀಲಂಕಾ ತಂಡಕ್ಕೆ ಭಾರತದ ಬೌಲರ್ ಗಳು ಪರಿಣಾಮಕಾರಿಯಾದ್ರು. ರವೀಂದ್ರ ಜಡೇಜಾ ಅಂದುಕೊಂಡಂತೆ ಪಿಚ್ ಸ್ಪಿನ್ನರ್ ಗಳಿಗೆ ನೆರವಾಗುತ್ತಿತ್ತು. ಪರಿಣಾಮ ಶ್ರೀಲಂಕಾ ತಂಡ 174 ರನ್ ಗಳಿಗೆ ಆಲೌಟ್ ಆಗಿ ಫಾಲೋ ಆನ್ ಗೆ ಸಿಲುಕಿತ್ತು. ಹಾಗೇ ಎರಡನೇ ಇನಿಂಗ್ಸ್ ನಲ್ಲಿ ರವೀಂದ್ರ ಜಡೇಜಾ ಮತ್ತು ಆಶ್ವಿನ್ ಲಂಕಾ ಬ್ಯಾಟ್ಸ್ ಮೆನ್ ಗಳನ್ನು ಪೆವಿಲಿಯನ್ ಪರೇಡ್ ನಡೆಸಿದ್ರು. ಇನ್ನೊಂದೆಡೆ ಮಹಮ್ಮದ್ ಶಮಿ ಎರಡು ವಿಕೆಟ್ ಪಡೆದ್ರು.
ಮೊದಲ ಇನಿಂಗ್ಸ್ ನಲಿ ಅಜೇಯ 175 ರನ್ ಹಾಗೂ ಐದು ವಿಕೆಟ್ ಹಾಗೂ ಎರಡನೇ ಇನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ಉರುಳಿಸಿದ್ದ ರವೀಂದ್ರ ಜಡೇಜಾ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು. ಅಲ್ಲದೆ ಹಲವು ದಾಖಲೆಗಳ ಒಡೆಯನಾದ್ರು.
ಮತ್ತೊಂದೆಡೆ ಆರ್. ಅಶ್ವಿನ್ ಅವರು ರಿಚರ್ಡ್ ಹ್ಯಾಡ್ಲಿ ಮತ್ತು ಕಪಿಲ್ ದೇವ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ರು. ಅಲ್ಲದೆ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಭಾರತ ಎರಡನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಎರಡನೇ ಟೆಸ್ಟ್ ಪಂದ್ಯ ನಮ್ಮ ಬೆಂಗಳೂರಿನಲ್ಲಿ ಮಾರ್ಚ್ 12ರಿಂದ ನಡೆಯಲಿದೆ. ಈ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದೆ.