Ind VS Eng: ಮೊದಲ ಟೆಸ್ಟ್‌ಗೆ ಟೀಮ್ ಇಂಡಿಯಾ ಸಿದ್ಧತೆ, ಎಡ್ಜ್ ಬಾಸ್ಟನ್‌ನಲ್ಲಿ ಅಗ್ನಿಪರೀಕ್ಷೆ
ಟೀಮ್ ಇಂಡಿಯಾ ಎಡ್ಜ್ ಬಾಸ್ಟ್ ಟೆಸ್ಟ್ ಗೆದ್ದರೆ ಐತಿಹಾಸಿಕ ದಾಖಲೆ, ಕನಿಷ್ಠ ಪಕ್ಷ ಡ್ರಾಗೊಂಡರೂ ಇತಿಹಾಸ ಖಚಿತ. ಸೋತರೂ ದಾಖಲೆ ಗ್ಯಾರೆಂಟಿ. ಹೀಗಾಗಿ ಬರ್ಮಿಂಗ್ ಹ್ಯಾಂನ ಎಡ್ಜ್ ಬಾಸ್ಟನ್ ಮೈದಾನದಲ್ಲಿ ನಡೆಯುವುದು ರಿಯಲ್ ಫೈಟ್. ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ಪ್ರತಿಷ್ಠೆಗಾಗಿ ನಡೆಯುವ ಫೈಟ್ ಕೂಡ ಹೌದು.
ಟೆಸ್ಟ್ ಆರಂಭಕ್ಕೆ ಮುನ್ನವೇ ಟೀಮ್ ಇಂಡಿಯಾ ಆಘಾತ ಅನುಭವಿಸಿದೆ. ರೋಹಿತ್ ಶರ್ಮಾ ಕೊರೊನಾದಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಜಸ್‌ಪ್ರಿತ್ ಬುಮ್ರಾ ಹೆಗಲ ಮೇಲೆ ಕ್ಯಾಪ್ಟನ್ಸಿ ಟೆನ್ಷನ್ ಇದೆ. ಆದರೆ ಸಾಂಘೀಕ ಪ್ರದರ್ಶನ ನೀಡುವ ವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಇಂಗ್ಲೆಂಡ್ ಗೆ ಶಾಕ್ ಕೊಡುವ ಪ್ಲಾನ್ ನಲ್ಲಿದೆ.
ಟೀಮ್ ಇಂಡಿಯಾ ಕಾಂಬಿನೇಷನ್ ಸೆಟ್ ಮಾಡಿಕೊಳ್ಳಲು ಕೊಂಚ ಒದ್ದಾಡಬೇಕಿದೆ. ರಾಹುಲ್ ಮತ್ತು ರೋಹಿತ್ ಅನುಪಸ್ಥಿತಿಯಲ್ಲಿ ಶುಭ್ಮನ್ ಗಿಲ್ ಮತ್ತು ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಚೇತೇಶ್ವರ ಪೂಜಾರ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ವಿರಾಟ್ ಕೊಹ್ಲಿ 4ರಲ್ಲಿ ಫಿಕ್ಸ್. ಹನುಮ ವಿಹಾರಿ ಮತ್ತು ಶ್ರೇಯಸ್ ನಡುವೆ 5ನೇ ಸ್ಥಾನಕ್ಕೆ ಫೈಟ್ ಇದ್ದರೂ ವಿಹಾರಿ ಇದನ್ನು ಗೆಲ್ಲಬಹುದು. ರಿಷಬ್ ಪಂತ್ ವಿಕೆಟ್ ಕೀಪರ್. ಆಲ್‌ರೌಂಡರ್ ಗಳ ಕೋಟಾ ಅಶ್ವಿನ್ ಮತ್ತು ಜಡೇಜಾ ಪಾಲಾಗಬಹುದು. ಶಾರ್ದೂಲ್ ಥಾಕೂರ್ ಮಧ್ಯಮ ವೇಗದ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡಬಲ್ಲ ಪ್ಲೇಯರ್. ನಾಯಕ ಬುಮ್ರಾ ಮತ್ತು ಮೊಹಮ್ಮದ್ ಶಮಿ ಹೊಸ ಚೆಂಡಿನ ಪರಿಣಿತ ಬೌಲರ್‌ಗಳು. ಒಂದು ವೇಳೆ ಮೊಹಮ್ಮದ್ ಸಿರಾಜ್‌ಗೆ ಅವಕಾಶ ನೀಡಿದರೆ ಅಶ್ವಿನ್ ಹೊರಗೆ ಕೂರಬಹುದು. India vs England – India will clinch series by winning fifth Test
ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧದ ಕ್ಲೀನ್ ಸ್ವೀಪ್ ಸಾಧನೆ ಮಾಡಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಆಲ್ ರೌಂಡರ್ ಬೆನ್ ಸ್ಟೋಕ್ಸ್ ನಾಯಕತ್ವವಹಿಸಿಕೊಂಡಿದ್ದಾರೆ. ಜಾಕ್ ಕ್ರೌಲಿ, ಅಲೆಕ್ಸ್ ಲೀಸ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಜೋ ರೂಟ್, ಓಲಿ ಪೋಪ್ ಟಾಪ್ ಆರ್ಡರ್ ಬ್ಯಾಟಿಂಗ್ ಶಕ್ತಿಗಳು. ಬೆನ್ ಸ್ಟೋಕ್ಸ್ ಮತ್ತು ಜಾನಿ ಬೇರ್ ಸ್ಟೋವ್ ಮಿಡಲ್ ಆರ್ಡರ್ ಶಕ್ತಿ. ಜೋಸ್ ಬಟ್ಲರ್ ಕೆಳ ಸರದಿಯ ಸೂಪರ್ ಬ್ಯಾಟರ್. ಜಾಕ್ ಲೀಚ್ ಸ್ಪೆಷಲಿಸ್ಟ್ ಸ್ಪಿನ್ನರ್. ಮ್ಯಾಥ್ಯೂ ಪ್ರೊಟ್, ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆಂಡರ್ಸನ್ ಫಾಸ್ಟ್ ಬೌಲರ್ ಗಳು.
ಬರ್ಮಿಂಗ್ ಹ್ಯಾಂ ಮೈದಾನ ಸ್ವಿಂಗ್ ಬೌಲರ್‌ಗಳಿಗೆ ಹೇಳಿ ಮಾಡಿಸಿದ ತಾಣ. ಹೀಗಾಗಿ ವೇಗಿಗಳ ಎದುರು ಬ್ಯಾಟಿಂಗ್ ತಾಕತ್ತು ತೋರಿಸುವುದು ಅನಿವಾರ್ಯ.