ಭುವನೇಶ್ವರ್: ಕಳಿಂಗ್ ಅಂಗಳದಲ್ಲಿ ನಡೆದ ಎಫ್ಐಎಚ್ ಪ್ರೊ ಲೀಗ್ ಟೂರ್ನಿಯಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಆತಿಥೇಯ ತಂಡ ೩-೧ ಗೋಲುಗಳಿಂದ ಪ್ರವಾಸಿ ಜರ್ಮನಿ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿದೆ.
ಭಾರತದ ಪರ ಸುಖ್ಜೀತ್ (19ನೇ ನಿಮಿಷ), ವರುಣ್ (41ನೇ ನಿಮಿಷ), ಅಭಿಷೇಕ್ (54ನೇ ನಿಮಿಷ) ಗೋಲು ಬಾರಿಸಿ ಜಯದಲ್ಲಿ ಮಿಂಚಿದರು. ಜರ್ಮನಿ ಪರ ಬೊಕೆಲ್ (45ನೇ ನಿಮಿಷ) ಗೋಲು ಬಾರಿಸಿ ಅಂತರವನ್ನು ಕಡಿಮೆ ಮಾಡಿದರು.
ಮೊದಲಾವಧಿಯ ಆಟದಲ್ಲಿ ಉಭಯ ತಂಡಗಳು ಗೋಲು ಬಾರಿಸುವಲ್ಲಿ ವಿಫಲವಾದವು. ಪರಿಣಾಮ ಉಭಯ ತಂಡದ ರಕ್ಷಣಾ ಆಟಗಾರರು ಸ್ಥಿರ ಪ್ರದರ್ಶನ ನೀಡಿದವು.
ಎರಡನೇ ಅವಧಿಯ ನಾಲ್ಕನೇ ನಿಮಿಷದಲ್ಲಿ ಸುಖ್ ಜೀತ್ ಫೀಲ್ಡ್ ಗೋಲು ಬಾರಿಸಿ ಮಿಂಚಿದರು. ಸಹ ಆಟಗಾರ ನೀಡಿದ ಉತ್ತಮ ಪಾಸ್ ನ ಲಾಭ ಪಡೆದ ಸುಖ್ ಜೀತ್ ಸೊಗಸಾದ ಗೋಲು ಬಾರಿಸಿದರು.
ಮೂರನೇ ಅವಧಿಯಲ್ಲಿ ಭಾರತ ಹಾಗೂ ಜರ್ಮನಿ ತಂಡಗಳು ತಲಾ ಒಂದೊಂದು ಗೋಲು ದಾಖಲಿಸಿದವು. ಭಾರತದ ಪರ ವರುಣ್ 41ನೇ ನಿಮಿಷದಲ್ಲಿ ಗೋಲು ಬಾರಿಸಿ ಅಂತರವನ್ನು ಹಿಗ್ಗಿಸಿದರು. ಈ ಗೋಲು ದಾಖಲಾದ ನಾಲ್ಕನೇ ನಿಮಿಷದಲ್ಲಿ ಜರ್ಮನಿ ತಂಡದ ಪರ ಬೊಕೆಲ್ ಗೋಲು ಸಿಡಿಸಿ ಮಿಂಚಿದರು.
ಕೊನೆಯ ೧೫ ನಿಮಿಷದಲ್ಲಿ ಆತಿಥೇಯ ತಂಡದ ಪರ ಅಭಿಷೇಕ್ ಮತ್ತೊಂದು ಗೋಲು ಬಾರಿಸಿ ಅಂತರ ಹಿಗ್ಗಿಸಿದರು.
FIH Pro League, India, Germany, Hockey