ಶ್ರೀಲಂಕಾ ಕ್ರಿಕೆಟ್ ತಂಡ ಭಾರತ ಪ್ರವಾಸದಲ್ಲಿದೆ. 3 ಪಂದ್ಯಗಳ ಟಿ20 ಸರಣಿಯಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿ ವೈಟ್ ವಾಷ್ ಮಾಡಿಸಿಕೊಂಡಿದೆ. ಈಗ ಟೆಸ್ಟ್ ಸರಣಿಗೆ ಸಿದ್ಧವಾಗುತ್ತಿದೆ. ಟೆಸ್ಟ್ನಲ್ಲಾದರೂ ಟೀಮ್ ಇಂಡಿಯಾಕ್ಕೆ ಫೈಟ್ ನೀಡುವ ಪ್ಲಾನ್ ಮಾಡುತ್ತಿದೆ.
ಮೊದಲ ಟೆಸ್ಟ್ ಪಂದ್ಯ ಧರ್ಮಶಾಲಾದಲ್ಲಿ ಮಾರ್ಚ್ 4ರಿಂದ ಆರಂಭವಾಗಲಿದೆ. ಬೆಳಗ್ಗೆ 9. 30ಕ್ಕೆ ಪಂದ್ಯ ಆರಂಭವಾಗಲಿದೆ. ಸಂಜೆ 4 ಗಂಟೆಗೆ ದಿನದ ಅಂತ್ಯ ಆಗಲಿದೆ. ಈ ಪಂದ್ಯಕ್ಕೆ ಪ್ರೇಕ್ಷಕರಿಗೆ ಮೈದಾನದ ಎಂಟ್ರಿಯನ್ನು ನಿಷೇಧಿಸಲಾಗಿದೆ.
2ನೇ ಟೆಸ್ಟ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಹಗಲು ರಾತ್ರಿ ಟೆಸ್ಟ್ ಪಂದ್ಯ ಇದಾಗಿರುವುದರಿಂದ ಮಧ್ಯಾಹ್ನ 12.30ಕ್ಕೆ ಪಂದ್ಯ ಆರಂಭವಾಗಿ ರಾತ್ರಿ 10 ಗಂಟೆ ತನಕ ನಡೆಯಲಿದೆ. ಈ ಟೆಸ್ಟ್ ಪಂದ್ಯಕ್ಕೆ ಅಭಿಮಾನಿಗಳಿಗೆ ಮೈದಾನಕ್ಕೆ ಎಂಟ್ರಿಯಾಗಲು ಅವಕಾಶವಿದೆ.