india -srilanka pink ball test – ಭಾರತ – ಶ್ರೀಲಂಕಾ 2ನೇ ಟೆಸ್ಟ್ – ಚಿನ್ನಸ್ವಾಮಿಯಲ್ಲಿ ಪಿಂಕ್ ಬಾಲ್ ಮ್ಯಾಚ್

ನಮ್ಮ ಬೆಂಗಳೂರನ ಚಿನ್ನಸ್ವಾಮಿ ಅಂಗಣ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗುತ್ತಿದೆ. ಇದೇ ಮೊದಲ ಬಾರಿ ಚಿನ್ನಸ್ವಾಮಿ ಅಂಗಣದಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯ ನಡೆಯಲಿದೆ.
ಮಾರ್ಚ್ 12ರಿಂದ 16ರವರೆಗೆ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದೆ.
ಮೊದಲ ಟೆಸ್ಟ್ ಪಂದ್ಯ ಮೊಹಾಲಿಯಲ್ಲಿ ಮಾರ್ಚ್4ರಿಂದ ಆರಂಭವಾಗಲಿದೆ. ಟೆಸ್ಟ್ ಸರಣಿ ಮುಗಿದ ನಂತರ ಮುಂಬೈ ಮತ್ತು ಪುಣೆಯಲ್ಲಿ 2022ರ ಐಪಿಎಲ್ ಹಬ್ಬ ಶುರುವಾಗಲಿದೆ.
ಪಂದ್ಯ 2 ಗಂಟೆಯಿಂದ 9 ಗಂಟೆಯ ತನಕ ನಡೆಯಲಿದೆ. ಈ ಟೆಸ್ಟ್ ಪಂದ್ಯವನ್ನು ನೋಡಲು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ.
ಮಾರ್ಚ್`1ರಿಂದ ಟಿಕೆಟ್ ಮಾರಾಟ ಮಾಡಲಾಗುತ್ತದೆ. ಕೆಎಸ್‍ಸಿಎ ವೆಬ್ ಸೈಟ್ ನಲ್ಲಿ ಟಿಕೆಟ್ ಅನ್ನು ಖರೀದಿಸಬಹುದು. ಟಿಕೆಟ್ ಬೆಲೆ ಈ ರೀತಿಯಾಗಿದೆ.