ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಗೆದ್ದಿದ್ದ ಭಾರತ, ಇತ್ತೀಚೆಗೆ ವೆಸ್ಟ್ಇಂಡೀಸ್ ತಂಡಕ್ಕೆ ವೈಟ್ ವಾಷ್ ಮಾಡಿ ಕಳುಹಿಸಿತ್ತು. ಈಗ ಶ್ರೀಲಂಕಾ ವಿರುದ್ಧದ ಸರಣಿಗೆಭಾರತ ಸಜ್ಜಾಗುತ್ತಿದೆ. ಸತತ ಮೂರನೇ ಟಿ20 ಸರಣಿ ಗೆಲ್ಲಲು ಟೀಮ್ಇಂಡಿಯಾ ನಾಯಕ ರೋಹಿತ್ ಶರ್ಮಾ ಸಿದ್ಧತೆ ಮಾಡಿಕೊಂಡಿದ್ದಾರೆ.
3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಲಖನೌದ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಶ್ರೀಲಂಕಾ ತಂಡ ಮೇಲ್ನೋಟಕ್ಕೆ ದೊಡ್ಡ ಸವಾಲು ಅಲ್ಲದೇ ಇದ್ದರೂ ಟಿ20 ಪಂದ್ಯಗಳಲ್ಲಿ ಅನುಭವ ಮತ್ತು ಶಕ್ತಿಯನ್ನು ಲೆಕ್ಕಕ್ಕೆ ಇಟ್ಟುಕೊಳ್ಳುವಂತಿಲ್ಲ. ಭಾರತ ತಂಡ ಮಾಜಿ ನಾಯಕ ವಿರಾಟ್ ಕೊಹ್ಲಿ, ರಿಷಭ್ ಪಂತ್, ದೀಪಕ್ ಚಹರ್, ರಂತಹ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಿ ಹೊಸ ಆಟಗಾರರ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಟ್ಟಿದೆ.
ಕಳೆದ ನವೆಂಬರ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆಯಲ್ಲಿ ಗಾಯಗೊಂಡಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ ಈ ಮ್ಯಾಚ್ನಲ್ಲಿ ಕಂ ಬ್ಯಾಕ್ ಮಾಡುತ್ತಿದ್ದಾರೆ. ಆದರೆ ದೀಪಕ್ ಚಾಹರ್ , ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆ.ಎಲ್. ರಾಹುಲ್ರಂತಹ ಪ್ರಮುಖ ಆಟಗಾರರು ಅಲಭ್ಯರಾಗಿರುವುದರಿಂದ ಕೊಂಚ ಹಿನ್ನಡೆ ಅನುಭವಿಸಿದೆ.
ಇನ್ನು ಶ್ರೀಲಂಕಾ ತಂಡ ಕೂಡ ಹೊಸ ಆಟಗಾರರಿಂದ ತುಂಬಿ ತುಳುಕುತ್ತಿದೆ. ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು 4-1ರಿಂದ ಕಳೆದುಕೊಂಡಿತ್ತು. ಆದರೆ ಸ್ಪಿನ್ ವಿರುದ್ಧ ಆಡಬಲ್ಲ ತಾಕತ್ತು ಲಂಕಾ ತಂಡಕ್ಕಿದೆ. ಹೀಗಾಗಿ ಟೀಮ್ ಇಂಡಿಯಾ ವಿರುದ್ಧದ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ
ಸಂಭಾವ್ಯ XI:
ಟೀಮ್ ಇಂಡಿಯಾ:
-
ರೋಹಿತ್ ಶರ್ಮಾ (ನಾಯಕ), 2. ರುತುರಾಜ್ ಗಾಯಕ್ವಾಡ್, 3. ಇಶಾನ್ ಕಿಶನ್, 4. ಸೂರ್ಯಕುಮಾರ್ ಯಾದವ್, 5. ಶ್ರೇಯಸ್ ಅಯ್ಯರ್, 6. ವೆಂಕಟೇಶ್ ಅಯ್ಯರ್,7. ರವೀಂದ್ರ ಜಡೇಜಾ, 8. ಅವೇಶ್ ಖಾನ್,9. ಹರ್ಷಲ್ ಪಟೇಲ್,10. ಜಸ್ಪ್ರೀತ್ ಬುಮ್ರಾ,11. ರವಿ ಬಿಷ್ಣೋಯ್
ಶ್ರೀಲಂಕಾ:
-
ದಸೂನ್ ಶನಕ (ನಾಯಕ), 2. ಪಥುಮ್ ನಿಸಾಂಕ, 3. ಕುಸಾಲ್ ಮೆಂಡಿಸ್, 4. ಚರಿತಾ ಅಸಲಂಕಾ (ಉಪ ನಾಯಕ), 5. ದಿನೆಶ್ ಚಂಡಿಮಾಲ್, 6. ದನುಷ್ಕ ಗುಣತಿಲಕೆ, 7. ಚಮಿಕಾ ಕರುಣರತ್ನೆ, 8. ಮಹೀಶ ತೀಕ್ಷಣ, 9. ದುಷ್ಮಾಂತ ಚಮೀರ, 10. ಲಹಿರು ಕುಮಾರ, 11. ಜೆಫ್ರೆ ವ್ಯಾಂಡೆರ್ಸೆ