ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಭಾರತ 2ನೇ ಪಂದ್ಯಕ್ಕೆ ಸಿದ್ಧವಾಗುತ್ತಿದೆ. ಮೊದಲ ಪಂದ್ಯದಲ್ಲಿ ಕಡುಬದ್ಧವೈರಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ದಾಖಲಿಸಿರುವ ಮಿಥಾಲಿ ರಾಜ್ ಬಳಗ ಈಗ ಬಲಿಷ್ಠ ಎದುರಾಳಿ ನ್ಯೂಜಿಲೆಂಡ್ ಸವಾಲು ಎದುರಿಸಲಿದೆ.
ಹ್ಯಾಮಿಲ್ಟನ್ನ ಸೆಡನ್ ಪಾರ್ಕ್ನಲ್ಲಿ ಈ ಪಂದ್ಯ ನಡೆಯಲಿದೆ. ಭಾರತ ಆಡಿರುವ 1 ಪಂದ್ಯದಲ್ಲಿ ಗೆದ್ದು ಬೀಗಿದೆ. ನ್ಯೂಜಿಲೆಂಡ್ ಮೊದಲ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಸೋತರೂ 2ನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಭರ್ಜರಿಯಾಗಿ ಸೋಲಿಸಿತ್ತು. ಜೊತೆಗೆ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲೂ ಭಾರತವನ್ನು ಕಿವೀಸ್ ಬಗ್ಗುಬಡಿದಿತ್ತು. ಹೀಗಾಗಿ ಎರಡೂ ತಂಡಗಳ ಮೇಲೆ ಹೆಚ್ಚು ಚರ್ಚೆ ನಡೆಯುತ್ತಿದೆ.
ಭಾರತದ ಬ್ಯಾಟಿಂಗ್ ಬಲ ಸ್ಟ್ರಾಂಗ್ ಆಗಿದೆ. ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಬಗ್ಗೆ ಹೆಚ್ಚು ಡೌಟ್ ಇಲ್ಲ. ಹರ್ಮನ್ ಪ್ರಿತ್ ಕೌರ್, ಯಸ್ತಿಕಾ ಭಾಟಿಯಾ, ಮಿಥಾಲಿ ರಾಜ್ ಮತ್ತು ದೀಪ್ತಿ ಶರ್ಮಾ ಸರಿಯಾದ ಆಟ ಆಡಿದರೆ ನ್ಯೂಜಿಲೆಂಡ್ಗೆ ಸಂಕಷ್ಟ ಖಚಿತ. ರಿಚಾ ಘೋಷ್, ಪೂಜಾ ವಸ್ತ್ರಾರ್ಕರ್ ಮತ್ತು ಸ್ನೇಹ್ ರಾಣಾ ಕೂಡ ಬ್ಯಾಟಿಂಗ್ ಮಾಡಬಲ್ಲರು. ಜೂಲನ್ ಗೋಸ್ವಾಮಿ, ರಾಜೇಶ್ವರಿ ಗಾಯಾಕ್ವಾಡ್, ಪೂನಂ ಯಾದವ್ ಬೌಲಿಂಗ್ ಸ್ಪೆಷಲಿಸ್ಟ್ ಗಳು.
ನ್ಯೂಜಿಲೆಂಡ್ ತಂಡವೂ ಸೂಪರ್ ಆಗಿದೆ. ಸೂಜಿ ಬೇಟ್ಸ್, ಸೋಫಿ ಡಿವೈನ್, ಅಮೆಲಿಯ ಕೆರ್, ಅದ್ಭುತ ಲಯದಲ್ಲಿದ್ದಾರೆ. ಆಮಿ ಸ್ಯಟರ್ವೇಟ್ ಮತ್ತು ಕೇಟಿ ಮಾರ್ಟಿನ್ ಕೂಡ ಉತ್ತಮ ಆಟ ಆಡಬಲ್ಲರು. ಲಿಯ ತಹುಹು, ಜೆಸ್ ಕೆರ್ ಬೌಲಿಂಗ್ ಶಕ್ತಿಗಳು,
ಹ್ಯಾಮಿಲ್ಟನ್ನ ಸೆಡನ್ ಪಾರ್ಕ್ ಆರಂಭದಲ್ಲಿ ವೇಗದ ಬೌಲರ್ಗಳಿಗೆ ನೆರವು ನೀಡುತ್ತದೆ. ಹೀಗಾಗಿ ಎರಡೂ ತಂಡಗಳಲ್ಲೂ ವೇಗದ ಬೌಲರ್ಗಳು ಗೆಲುವನ್ನು ನಿರ್ಧರಿಸಬಹುದು ಅನ್ನುವ ವಿಶ್ಲೇಷಣೆ ಇದೆ,.