Friday, January 27, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

ಟೀಮ್​​ ಇಂಡಿಯಾಕ್ಕೆ 2ನೇ ಸವಾಲು, ಏಕದಿನ ಸರಣಿ ಭವಿಷ್ಯ ಇಲ್ಲೇ ನಿರ್ಣಯ..!

January 20, 2022
in Cricket, ಕ್ರಿಕೆಟ್
ಟೀಮ್​​ ಇಂಡಿಯಾಕ್ಕೆ 2ನೇ ಸವಾಲು, ಏಕದಿನ ಸರಣಿ ಭವಿಷ್ಯ ಇಲ್ಲೇ ನಿರ್ಣಯ..!
Share on FacebookShare on TwitterShare on WhatsAppShare on Telegram

ಟೆಸ್ಟ್​​ ಸರಣಿಯನ್ನು ಸೋತ ಟೀಮ್​​ ಇಂಡಿಯಾ ಈಗ ಏಕದಿನ ಸರಣಿಯನ್ನೂ ಕಳೆದುಕೊಳ್ಳುವ ಭೀತಿಯಲ್ಲಿದೆ. ಆದರೆ ಪಾರ್ಲ್​ ನಲ್ಲಿ ನಡೆಯುವ 2ನೇ ಏಕದಿನ ಪಂದ್ಯವನ್ನು ಗೆದ್ದರೆ, ಅಂತಿಮ ಏಕದಿನ ಪಂದ್ಯ ಸರಣಿ ವಿಜೇತರನ್ನು ನಿರ್ಧಾರ ಮಾಡಲಿದೆ.

ಮೊದಲ ಏಕದಿನ ಪಂದ್ಯದಲ್ಲಿ ಟೀಮ್​​ ಇಂಡಿಯಾ ಆರಂಭದಲ್ಲಿ ಮೇಲುಗೈ ಪಡೆದರೂ ನಂತರ ಎಡವಿತು. ಮಧ್ಯಮ ಕ್ರಮಾಂಕದ ಬ್ಯಾಟಿಂಗ್​​ ವೈಫಲ್ಯ ತಂಡವನ್ನು ಸೋಲಿನ ಕಡೆ ತಳ್ಳಿತು. ಹೀಗಾಗಿ ಟೀಮ್​​ ಇಂಡಿಯಾ 2ನೇ ಪಂದ್ಯದಲ್ಲಿ ಹೊಸ ಪ್ರಯೋಗ ಮಾಡಬಹುದು. ಶಿಖರ್​​ ಧವನ್​​ ಜೊತೆ ರುತುರಾಜ್​​ ಗಾಯಕ್ವಾಡ್​ ರನ್ನು ಆರಂಭಿಕರಾಗಿ ಕಣಕ್ಕಿಳಿಸಿ, ನಾಯಕ ಕೆ.ಎಲ್​​. ರಾಹುಲ್​​ ಫಿನಿಷರ್​​ ಜವಾಬ್ದಾರಿಯನ್ನು ಹೊರಬಹುದು. ಮತ್ತೊಂದು ಕಡೆ ಯಜ್ವೇಂದ್ರ ಚಹಲ್​​​​ ಬದಲಿಗೆ ವೆಂಕಟೇಶ್​​ ಅಯ್ಯರ್​​ ರನ್ನು ಮುಂದುವರೆಸಿದರೆ ಬ್ಯಾಟಿಂಗ್​​​ ಬಲವಾಗುವ ಜೊತೆ ಬೌಲಿಂಗ್​​ ಆಯ್ಕೆಯೂ ಸಿಗುತ್ತದೆ. ಫಾಸ್ಟ್​​ ಬೌಲಿಂಗ್​​ನಲ್ಲಿ ಮೊಹಮ್ಮದ್​​ ಸಿರಾಜ್​ ಅಥವಾ ದೀಪಕ್​​ ಚಹರ್​​ ಭುವನೇಶ್ವರ್​​ ಕುಮಾರ್​​ ಜಾಗದಲ್ಲಿ ಆಡಬಹುದು. ಉಳಿದಂತೆ ಹೆಚ್ಚಿನ ಬದಲಾವಣೆ ಕಷ್ಟ.

ಇನ್ನು ದಕ್ಷಿಣ ಆಫ್ರಿಕಾ ತಂಡ ಮೊದಲ ಪಂದ್ಯ ಗೆದ್ದಿರುವುದರಿಂದ ತಂಡದಲ್ಲಿ ಬದಲಾವಣೆ ಮಾಡುವುದು ಕಷ್ಟ.  ಆದರೂ ಜನ್ನೆಮನ್​​ ಮಲನ್​, ಕ್ವಿಂಟಾನ್​​ ಡಿ ಕಾಕ್​​ ಮತ್ತು ಏಡಿಯನ್​​ ಮಾರ್ಕ್​ ರಾಂ ಬ್ಯಾಟಿಂಗ್​​ನಲ್ಲಿ ಮಿಂಚಬೇಕಿದೆ. ತೆಂಬ ಬವುಮಾ ಮತ್ತು ರಾಸಿ ವಾಂಡರ್​​ ಡ್ಯುಸನ್​​ ಮೊದಲ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಡೇವಿಡ್​​ ಮಿಲ್ಲರ್​, ಆ್ಯಂಡಿ ಫೆಹಲ್ಕುವಾಯೋ ಕೂಡ ಅವಕಾಶ ಸಿಕ್ಕರೆ ಸಿಡಿಯಬಹುದು. ಬೌಲಿಂಗ್​​ನಲ್ಲೂ ದಕ್ಷಿಣ ಆಫ್ರಿಕಾ ಹೆಚ್ಚು ಚಿಂತೆ ಮಾಡುತ್ತಿಲ್ಲ.

ಪಾರ್ಲ್​ ಪಿಚ್​​​ ನಲ್ಲಿ ಬ್ಯಾಟ್ಸ್​​ ಮನ್​​ಗಳು ಹೊಂದಿಕೊಂಡರೆ ರನ್​​ ಗಳಿಸಬಹುದು ಅನ್ನುವುದು ಮೊದಲ ಪಂದ್ಯದಲ್ಲಿ ಗೊತ್ತಾಗಿದೆ. ಹೀಗಾಗಿ ಹೊಂದಾಣಿಕೆಯ ಆಟವೇ ನಿರ್ಣಾಯಕವಾಗಿದೆ.

ಸಂಭಾವ್ಯ ಪ್ಲೇಯಿಂಗ್​​ 11

ಟೀಮ್​​ ಇಂಡಿಯಾ

  1. ಕೆ.ಎಲ್​​. ರಾಹುಲ್​ (ನಾಯಕ), 2. ಶಿಖರ್​​ ಧವನ್​​, 3. ವಿರಾಟ್​​ ಕೊಹ್ಲಿ, 4. ಶ್ರೇಯಸ್​ ಅಯ್ಯರ್​​, 5. ರಿಷಬ್​​ ಪಂತ್​, 6. ಆರ್​. ಅಶ್ವಿನ್​, 7.ಶಾರ್ದೂಲ್​​ ಥಾಕೂರ್​​, 8. ಜಸ್​ ಪ್ರಿತ್​​ ಬುಮ್ರಾ, 9. ದೀಪಕ್​​ ಚಹರ್​​/ ಮೊಹಮ್ಮದ್​ ಸಿರಾಜ್​​/ ಭುವನೇಶ್ವರ್​​ ಕುಮಾರ್​, 10. ರುತುರಾಜ್​​​​ ಗಾಯಕ್ವಾಡ್​/ ವೆಂಕಟೇಶ್​​ ಅಯ್ಯರ್​​, 11. ಚಹಲ್​​

ದಕ್ಷಿಣ ಆಫ್ರಿಕಾ

  1. ಕ್ವಿಂಟಾನ್​​ ಡಿ ಕಾಕ್​​, 2. ಜನ್ನೆಮನ್​ ಮಲನ್​​, 3. ಏಡಿಯನ್​ ಮಾರ್ಕ್​ ರಾಂ, 4. ತೆಂಬ ಬವುಮಾ, 5. ರಾಸಿ ವಾಂಡರ್​​ ಡ್ಯುಸನ್​​, 6. ಡೇವಿಡ್​​ ವಿಲ್ಲರ್​, 7. ಆ್ಯಂಡಿ ಫೆಹಲ್ಕುವಾಯೊ, 8. ಮಾರ್ಕೋ ಜನ್ಸನ್​, 9. ಕೇಶವ್​​ ಮಹಾರಾಜ್​​, 10 . ಲುಂಗಿ ಎನ್​​ಗಿಡಿ, 11. ತಬ್ರೈಜ್​ ಶಂಶಿ

6ae4b3ae44dd720338cc435412543f62?s=150&d=mm&r=g

admin

See author's posts

Tags: India Tour ofSouth AfricaTeam India
ShareTweetSendShare
Next Post
ಲಕ್ನೋಗೆ ರಾಹುಲ್​ ಕ್ಯಾಪ್ಟನ್​​, ಅಹ್ಮದಾಬಾದ್​ಗೆ ಹಾರ್ದಿಕ್​​ ಸಾರಥ್ಯ, ಸ್ಪೆಷಲ್​​ ಪಿಕ್​​ ಪೂರ್ಣಗೊಳಿಸಿದ ಹೊಸ ಫ್ರಾಂಚೈಸಿಗಳು

ಲಕ್ನೋಗೆ ರಾಹುಲ್​ ಕ್ಯಾಪ್ಟನ್​​, ಅಹ್ಮದಾಬಾದ್​ಗೆ ಹಾರ್ದಿಕ್​​ ಸಾರಥ್ಯ, ಸ್ಪೆಷಲ್​​ ಪಿಕ್​​ ಪೂರ್ಣಗೊಳಿಸಿದ ಹೊಸ ಫ್ರಾಂಚೈಸಿಗಳು

Leave a Reply Cancel reply

Your email address will not be published. Required fields are marked *

Stay Connected test

Recent News

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

T20: ಧೋನಿ ತವರಿನಲ್ಲಿ ಭಾರತ, ನ್ಯೂಜಿಲೆಂಡ್ ಫೈಟ್

January 27, 2023
Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

Under-19: ಇಂದು ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಫೈಟ್

January 27, 2023
Ravindra Jadeja ರಣಜಿ ಆಡಲಿದ್ದಾರೆ ಸೌರಾಷ್ಟ್ರ ಸ್ಟಾರ್ ರವೀಂದ್ರ ಜಡೇಜಾ

ರಣಜಿ: ತಮಿಳುನಾಡು ವಿರುದ್ಧ ಎರಡನೇ ಇನಿಂಗ್ಸ್‍ನಲ್ಲಿ 7 ವಿಕೆಟ್ ಪಡೆದ ಜಡೇಜಾ

January 27, 2023
Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

Tennis: ಸಬಲೆಂಕಾ-ರೈಬ್ಕಿನಾ ನಡುವೆ ಫೈನಲ್ ಫೈಟ್, ಇಂದು ಸಾನಿಯಾ-ಬೋಪಣ್ಣ ಫೈನಲ್

January 26, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram