ಲಕ್ನೋದಲ್ಲಿ ನಡೆದ ಮೊದಲ ಟಿ20 ಪಂದ್ಯ ಏಕಪಕ್ಷೀಯವಾಗಿ ಭಾರತದ ಪಾಲಾಗಿತ್ತು. 62 ರನ್ಗಳ ಗೆಲುವಿನ ಮೂಲಕ ಟೀಮ್ ಇಂಡಿಯಾ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಗೆದ್ದುಕೊಂಡಿತ್ತು. ಈಗ 2ನೇ ಪಂದ್ಯಕ್ಕೆ ಧರ್ಮಶಾಲಾದಲ್ಲಿ ಅಖಾಡ ಫಿಕ್ಸ್ ಆಗಿದೆ. ಟೀಮ್ ಇಂಡಿಯಾ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದರೆ, ಶ್ರೀಲಂಕಾ ಸರಣಿ ಸಮಮಾಡಿಕೊಂಡು ತಿರಗಿ ಬೀಳುವ ಲೆಕ್ಕಾಚಾರದಲ್ಲಿದೆ.
ಸ್ಟಾರ್ ಆಟಗಾರರ ಅನುಪಸ್ಥಿತಿ ಟೀಮ್ ಇಂಡಿಯಾದಲ್ಲಿ ಹೊಸ ಸ್ಟಾರ್ಗಳನ್ನು ಹುಟ್ಟುವಂತೆ ಮಾಡಿದೆ. ಇಶನ್ ಕಿಶನ್ ಆಟಕ್ಕಿಳಿದರೆ ಏನಾಗಬಹುದು ಅನ್ನುವುದು ಗೊತ್ತಾಗಿದೆ. ರೋಹಿತ್ ಶರ್ಮಾ ಎಂದಿನಂತೆ ಹಿಟ್ ಮ್ಯಾನ್ ಅನ್ನುವುದು ಗೊತ್ತು. ವಿರಾಮ ಪಡೆದಿರುವ ಕೊಹ್ಲಿ ಜಾಗದಲ್ಲಿ ಆಡುವ ಶ್ರೇಯಸ್ ಫಿನಿಷರ್ ಆಗಿಯೂ ಮಿಂಚಿದ್ದಾರೆ. ರವೀಂದ್ರ ಜಡೇಜಾಗೆ ಬ್ಯಾಟಿಂಗ್ ಭಡ್ತಿ ನೀಡುವ ಯೋಚನೆ ಹೊಸ ಪ್ಲಾನ್ಗೆ ಸಾಕ್ಷಿಯಾಗಿದೆ. ದೀಪಕ್ ಹೂಡ ಮತ್ತು ಸಂಜು ಸ್ಯಾಮ್ಸನ್ ಅವಕಾಶ ಸಿಕ್ಕರೆ ಬ್ಯಾಟಿಂಗ್ ಬಲ ತೋರಿಸಲಿದ್ದಾರೆ. ವೆಂಕಟೇಶ್ ಅಯ್ಯರ್ ಆಲ್ರೌಂಡರ್ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಜಸ್ಪಿತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಅನುಭವದ ಖನಿಯಾಗಿದ್ದಾರೆ. ಹರ್ಷಲ್ ಪಟೇಲ್ ಡೆತ್ ಓವರ್ ಸ್ಪೆಷಲಿಸ್ಟ್. ಸ್ಪಿನ್ ಸ್ಪೆಷಲಿಸ್ಟ್ ಯಜುವೇಂದ್ರ ಚಹಲ್ ಸ್ಥಾನ ಗಟ್ಟಿ. ಹೀಗಾಗಿ ಟೀಮ್ ಇಂಡಿಯಾ ಎಲ್ಲೂ ವೀಕ್ ಆಗಿ ಕಾಣುವುದೇ ಇಲ್ಲ.
ಶ್ರೀಲಂಕಾ ತಂಡ ಹೊಸಬರನ್ನು ತುಂಬಿಕೊಂಡರೂ ಟಿ20 ಆಟಕ್ಕೆ ಬೇಕಾದ ಖಡಕ್ ಕಾಣುತ್ತಿಲ್ಲ. ಬ್ಯಾಟಿಂಗ್ನಲ್ಲಿ ಚರಿತ್ ಅಸಲಂಕಾ ಒಬ್ಬರನ್ನು ಬಿಟ್ಟರೆs ಉಳಿದವರ ಬಳಿ ಕ್ಷಮತೆ ಕಂಡಿಲ್ಲ. ಪಥುನ್ ನಿಸ್ಸಾಂಕ, ದಿನೇಶ್ ಚಾಂಡಿಮಲ್, ದಾಸುನ್ ಶಣಕ ಸೇರಿದಂತೆ ಪ್ರತಿಭಾನ್ವತಿರ ದಂಡೇ ಇದ್ದರೂ ತಂಡದ ಕೈ ಹಿಡಿಯುತ್ತಿಲ್ಲ. ಬೌಲಿಂಗ್ನಲ್ಲಿ ಲಹಿರು ಕುಮಾರ, ಕರುಣರತ್ನೆ ಮತ್ತು ದುಶ್ಮಂತ್ ಚಾಮಿರಾ ಮಾತ್ರ ಅನುಭವಿಗಳು. ಸ್ಪಿನ್ ವಿಭಾಗದ ವೈಫಲ್ಯ ಲಂಕಾ ತಂಡವನ್ನು ಕಾಡುತ್ತಿದೆ.
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ 2ನೇ ಟಿ-20 ಪಂದ್ಯ ನಡೆಯುತ್ತಿರುವುದರಿಂದ ಡ್ಯು ಫ್ಯಾಕ್ಟರ್ ಫಲಿತಾಂಶದ ಮೇಲೆ ಪ್ರಭಾವ ಬೀರುವುದು ಖಚಿತ. ಸಂಜೆ ವೇಳೆ ಟೆಂಪರೇಷರ್ ಡ್ರಾಪ್ ಆಗುವುದರಿಂದ ಬೌಲರ್ಗಳಿಗೂ ನೆರವು ಸಿಗಬಹುದು. ಒಟ್ಟಿನಲ್ಲಿ ಟೀಮ್ ಇಂಡಿಯಾ 3ನೇ ಪಂದ್ಯಕ್ಕೂ ಮುನ್ನ ಸರಣಿ ಗೆಲುವಿನ ಪ್ಲಾನ್ ಮಾಡಿದ್ದರೆ ಶ್ರೀಲಂಕಾ ಅಂತಿಮ ಪಂದ್ಯದ ಫಲಿತಾಂಶವನ್ನು ರೋಚಕವಾಗಿಡುವುದಕ್ಕಾಗಿ ಗೆಲ್ಲಲೇಬೇಕಿದೆ.
ಸಂಭಾವ್ಯ X1:
ಭಾರತ:
-
ರೋಹಿತ್ ಶರ್ಮಾ, 2. ಇಶನ್ ಕಿಶನ್, 3. ಶ್ರೇಯಸ್ ಅಯ್ಯರ್, 4. ಸಂಜು ಸ್ಯಾಮ್ಸನ್, 5. ರವೀಂದ್ರ ಜಡೇಜಾ, 6. ದೀಪಕ್ ಹೂಡ, 7. ವೆಂಕಟೇಶ್ ಅಯ್ಯರ್, 8. ಹರ್ಷಲ್ ಪಟೇಲ್, 9. ಭುವನೇಶ್ವರ್ ಕುಮಾರ್, 10. ಜಸ್ ಪ್ರಿತ್ ಬುಮ್ರಾ, 11. ಯಜುವೇಂದ್ರ ಚಹಲ್
ಶ್ರೀಲಂಕಾ:
-
ಪಥುನ್ ನಿಸ್ಸಾಂಕ, 2. ಕುಸಾಲ್ ಮೆಂಡಿಸ್, 3. ಚರಿತ್ ಅಸಲಂಕಾ, 4. ದಿನೇಶ್ ಚಾಂಡಿಮಲ್, 5. ದಾಸುನ್ ಶನಕ, 6. ಕರುಣರತ್ನೆ, 7. ದುಶ್ಮಂತ್ ಚಾಮಿರಾ, 8. ಲಹಿರು ಕುಮಾರ, 9. ಪ್ರವೀಣ್ ಜಯವಿಕ್ರಮ, 10. ಜೆಫ್ರಿ ವ್ಯಾಂಡರ್ಸೆ, 11. ಕಮಿಲ್ ಮಿಶ್ರಾ