ಇದು ಸೂಪರ್ ಸಂಡೇಯ ಸಖತ್ ಮ್ಯಾಚ್. ಜಗತ್ತಿನ ಎಲ್ಲಾ ಕಣ್ಣುಗಳನ್ನು ತನ್ನ ಸೆಳೆಯುವ ಪಂದ್ಯವಿದು. ಭಾನುವಾರದ ಹೋರಾಟದಲ್ಲಿ ಭಾರತ (India)ಕಡುವೈರಿ ಪಾಕಿಸ್ತಾನದ (Pakistan)ವಿರುದ್ಧ ಕಣಕ್ಕಿಳಿಯುತ್ತಿದೆ. ಭಾನುವಾರ ಯಾರಿಗೆ ಗೆಲುವಿನ ಲಕ್ ಇದೆ ಅನ್ನುವುದು ಕುತೂಹಲ ಕೆರಳಿಸಿದೆ. ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ (Melbourn Cricket Ground)ಎರಡು ಕೆರಳಿದ ಸಿಂಹಗಳು ಕಾದಾಟ ನಡೆಸುತ್ತಿರುವುದು ರಣರೋಚಕ ಪಂದ್ಯವಾಗುವುದು ಖಚಿತ.
ಕಳೆದ ವಿಶ್ವಕಪ್‌ನಲ್ಲಿ (T20 Worldcup) ಭಾರತ (Ind) ಮೊತ್ತ ಮೊದಲ ಬಾರಿಗೆ ವಿಶ್ವಕಪ್ ಕೂಟಗಳಲ್ಲಿ ಪಾಕ್ (Pak) ವಿರುದ್ಧ ಸೋಲನುಭವಿಸಿತ್ತು. ಈಗ ಭಾರತ ಸೇಡಿಗಾಗಿ ಕಾಯುತ್ತಿದೆ. ಈಗ ಎರಡು ತಂಡಗಳು ಮತ್ತೆ ಮೈ ಕೊಡವಿಕೊಂಡು ಪಂದ್ಯಕ್ಕೆ ಸಜ್ಜಾಗಿರುವುದರಿಂದ ಟೀಮ್ ಕಾಂಬಿನೇಷನ್ ಬಗ್ಗೆ ಕುತೂಹಲ ಹೆಚ್ಚಿದೆ. ಎರಡೂ ತಂಡಗಳು ಬಲಿಷ್ಠ ಆಟಗಾರರನ್ನೇ ಕಣಕ್ಕಿಳಿಸಲಿವೆ. ಟೀಮ್ ಇಂಡಿಯಾಕ್ಕೆ (Team India) ಬ್ಯಾಟಿಂಗ್‌ನಲ್ಲಿನ ಅಸ್ಥಿರತೆ ಹಾಗೂ ಬೌಲಿಂಗ್‌ನಲ್ಲಿ ಡೆತ್ ಓವರ್ ಪ್ಲಾಬ್ಲಂ ಚಿಂತೆಯಾದರೆ, ಪಾಕಿಸ್ತಾನಕ್ಕೆ ಕೂಡ ಬ್ಯಾಟಿಂಗ್ ವೈಫಲ್ಯದ ಪ್ರಾಬ್ಲಂ ಇದ್ದೇ ಇದೆ.
ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ . ಇವರಿಬ್ಬರು ಸ್ಪೋಟಕ ಆಟ ಆಡಿದರೆ ಎಂಸಿಜಿಯಲ್ಲಿ ಪಾಕ್ ಚಿಂದಿ ಚಿಂದಿಯಾಗುವುದು ಖಚಿತ. ಕಿಂಗ್ ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಭಾರತಕ್ಕೆ ನಿರ್ಣಾಯಕ. ಸೂರ್ಯಕುಮಾರ್ ಯಾದವ್ ಆಟವೇ ಭಾರತಕ್ಕೆ ಪ್ಲಸ್ ಪಾಯಿಂಟ್. ಹಾರ್ದಿಕ್ ಪಾಂಡ್ಯಾ ಮತ್ತು ದಿನೇಶ್ ಕಾರ್ತಿಕ್ ಫಿನಿಷಿಂಗ್ ಟಚ್ ಕೊಡಬಲ್ಲರು. ಅಕ್ಸರ್ ಪಟೇಲ್ ಆಟವೂ ತುಂಬಾ ಪ್ರಮುಖ ಪಾತ್ರವಹಿಸಲಿದೆ. ಭುವನೇಶ್ವರ್ ಕುಮಾರ್, ಅರ್ಶದೀಪ್ ಮತ್ತು ಮೊಹಮ್ಮದ್ ಶಮಿ ವೇಗದ ಬೌಲಿಂಗ್ ಜೋಡಿಯಾಗಬಲ್ಲರು. ಹರ್ಷಲ್ ಪಟೇಲ್ ಬೇಕು ಅಂದರೆ ಅರ್ಶದೀಪ್ ಹೊರಗಿರಬೇಕಾಗುತ್ತದೆ. ಸ್ಪಿನ್ನರ್ ಕೋಟಾಕ್ಕೆ ಯಜುವೇಂದ್ರ ಚಹಲ್ ಫ್ರಂಟ್ ರನ್ನರ್ ಆಗಿದ್ದರೂ, ಅಶ್ವಿನ್ ಬ್ಯಾಟಿಂಗ್ ಶಕ್ತಿ ಅವರಿಗೆ ಬೋನಸ್ ಆಗಬಹುದು. ಹಾರ್ದಿಕ್ ಪಾಂಡ್ಯಾ ಟೀಮ್ ಇಂಡಿಯಾದ 6ನೇ ಬೌಲಿಂಗ್ ಆಪ್ಶನ್ ಆಗಿರಬೇಕಿದೆ.
ಪಾಕಿಸ್ತಾನ ತಂಡಕ್ಕೆ ನಾಯಕ ಬಾಬರ್ ಅಜಂ ಮೊಹಮ್ಮದ್ ರಿಜ್ವಾನ್ ಫಾರ್ಮ್‌ಗೆ ತುಂಬಾ ಕ್ರೂಶಿಯಲ್ . ಫಖರ್ ಝುಮಾನ್ ಕುಶುಲ್ ಶಾ, ಆಸೀಫ್ ಅಲಿ ಮತ್ತು ಇಫ್ತಿಕರ್ ಅಹ್ಮದ್ ಬ್ಯಾಟಿಂಗ್ ಬಲವಿದೆ. ಶದಾಬ್ ಖಾನ್ ಮತ್ತು ಮೊಹಮ್ಮದ್ ನೂಮನ್ ಸ್ಪಿನ್ ಶಕ್ತಿಯಾದರೆ, ಹ್ಯಾರಿಸ್ ರೌಫ್ ಮತ್ತು ನಸೀಮ್ ಷಾ ವೇಗದ ಬೌಲಿಂಗ್‌ನ ಅಸ್ತ್ರಗಳು. ಇವರ ಜೊತೆ ಶಾಹಿನ್ ಅಫ್ರಿಧಿ ಕೂಡ ಮಿಂಚು ಹರಿಸಲು ಸಿದ್ಧವಾಗಿದ್ದಾರೆ.
ಮೆಲ್ಬರ್ನ್ ಪಿಚ್‌ನಲ್ಲಿ (MCG) ರನ್‌ಗಳು ಹೇಗೆ ಬರುತ್ತವೆ ಅನ್ನುವುದು ಕೂಡ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ದೊಡ್ಡ ಬೌಂಡರಿಗಳು ಬೌಲರ್‌ಗಳಿಗೆ ಅಡ್ವಾಂಟೇಜ್ ಅನ್ನುವುದರಲ್ಲಿ ಎರಡು ಮಾತಿಲ್ಲ. ಒಟ್ಟಿನಲ್ಲಿ ಇಂಡೋ-ಪಾಕ್ (Ind VS Pak) ಕದನ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ.