ಟೀಮ್ ಇಂಡಿಯಾದ ಸ್ಟಾರ್ ಓಪನರ್ ಗಳಾದ ಶುಭ್ಮನ್ ಗಿಲ್ ಹಾಗೂ ನಾಯಕ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಇಬ್ಬರೂ ಆರಂಭಿಕರು ಮೊದಲ ವಿಕೆಟ್ಗೆ ದ್ವಿಶತಕದ ಜೊತೆಯಾಟವನ್ನು ನೀಡಿದರು. ಅಲ್ಲದೆ ವೈಯಕ್ತಿಕವಾಗಿ ಶತಕ ಬಾರಿಸಿ ಆರ್ಭಟಿಸಿದರು.
52 ಇನಿಂಗ್ಸ್ ಗಳಿಂದ ಶತಕದ ಬರ ಅನುಭವಿಸುತ್ತಿದ್ದ ರೋಹಿತ್ ಶರ್ಮಾ, ಮಂಗಳವಾರ ಅಮೋಘ ಆಟ ಆಡಿದರು. ತಮ್ಮ ಮೇಲಿನ ಟೀಕೆಗಳಿಗೆ ಅಂಗಳದಲ್ಲಿ ಉತ್ತರ ನೀಡಿದ ರೋಹಿತ್ 1100 ದಿನಗಳ ಬಳಿಕ ಮೂರಂಕಿ ಮುಟ್ಟಿ ಸಂಭ್ರಮಿಸಿದರು. ಇವರನ್ನು ಕಟ್ಟಿ ಹಾಕಲು ನ್ಯೂಜಿಲೆಂಡ್ ತಂಡ ಮಾಡಿಕೊಂಡ ಪ್ಲ್ಯಾನ್ ಕೈ ಕೊಟ್ಟಿತು. ರೋಹಿತ್, 85 ಎಸೆತಗಳಲ್ಲಿ 9 ಔಂಡರಿ, 6 ಸಿಕ್ಸರ್ ನೆರವಿನಿಂದ 101 ರನ್ ಬಾರಿಸಿ ಔಟ್ ಆದರು.
ಟೀಮ್ ಇಂಡಿಯಾದ ಯಂಗ್ ಓಪನರ್ ಶುಭ್ಮನ್ ಗಿಲ್ ಅಬ್ಬರ ಮುಂದುರೆಸಿದರು. ಇದೇ ವರ್ಷ ಮೂರನೇ ಶತಕ ಬಾರಿಸಿದ ಗಿಲ್ ಅರ್ಭಟಿಸಿದರು. ಶುಭ್ಮನ್ 78 ಎಸೆತಗಳಲ್ಲಿ 13 ಬೌಂಡರಿ, 5 ಸಿಕ್ಸರ್ ಸಹಾಯದಿಂದ 112 ರನ್ ಬಾರಿಸಿದರು.
ಮೊದಲ ವಿಕೆಟ್ಗೆ ರೋಹಿತ್ ಶರ್ಮಾ, ಶುಭ್ಮನ್ ಗಿಲ್ 26.1 ಓವರ್ಗಳಲ್ಲಿ 212 ರನ್ ಗಳ ಜೊತೆಯಾಟವನ್ನು ನೀಡಿದರು
IND VS NZ, Team India, New Zealand, ODI Series, Century,