ʼಭಾರತೀಯ ಕ್ರಿಕೆಟ್‌ನ ಹೊಸ ರಾಜಕುಮಾರʼನಾಗಿ ಮಿಂಚುತ್ತಿರುವ ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್, ಏಕದಿನ ಕ್ರಿಕೆಟ್‌ನಲ್ಲಿ ಶಿಖರ್ ಧವನ್ ಅವರ ದಾಖಲೆ ಮುರಿಯುವ ಅವಕಾಶ ಹೊಂದಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಶುಭ್ಮನ್ ಗಿಲ್, ಇತ್ತೀಚೆಗೆ ನಡೆದ ಏಷ್ಯಾಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸರ್ವಶ್ರೇಷ್ಠ ಫಾರ್ಮ್‌ನಲ್ಲಿರುವ ಆರಂಭಿಕ ಬ್ಯಾಟರ್, ಆಸ್ಟ್ರೇಲಿಯಾ ವಿರುದ್ಧದ ODI ಸರಣಿ ಸೇರಿದಂತೆ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗಾಗಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಭಾರತದ ಅನುಭವಿ ಆಟಗಾರ ಶಿಖರ್ ಧವನ್ ಅವರ ದಾಖಲೆ ಮುರಿಯುವತ್ತ ಶುಭ್ಮನ್ ಗಿಲ್ ಕಣ್ಣಿಟ್ಟಿದ್ದಾರೆ.
ಪ್ರಸ್ತುತ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 2000 ರನ್ ಪೂರೈಸಿದ ದಾಖಲೆಯನ್ನ ಶಿಖರ್ ಧವನ್ ಹೊಂದಿದ್ದು, 48 ಇನ್ನಿಂಗ್ಸ್‌ಗಳಲ್ಲಿ ಧವನ್ ಈ ಮೈಲಿಗಲ್ಲು ದಾಟಿದ್ದರು. ಇದೀಗ ಈ ದಾಖಲೆ ಮುರಿಯುವ ಅವಕಾಶ ಹೊಂದಿರುವತ್ತ ಶುಭ್ಮನ್ ಗಿಲ್, ಮುಂದಿನ 14 ಇನ್ನಿಂಗ್ಸ್‌ಗಳಲ್ಲಿ ಕೇವಲ 261 ರನ್‌ಗಳಿಸಬೇಕಿದೆ. ಆದರೆ ಪ್ರಸ್ತುತ ಶುಭ್ಮನ್ ಗಿಲ್ ಇರುವ ಫಾರ್ಮ್ ಗಮನಿಸಿದರೆ ಸೆ.22ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೇ ಈ ದಾಖಲೆ ಮುರಿಯುವ ಸಾಧ್ಯತೆ ಇದೆ.
ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಆಗಿ ಯಶಸ್ಸು ಕಂಡಿರುವ ಶುಭ್ಮನ್ ಗಿಲ್, 33 ಏಕದಿನ ಪಂದ್ಯಗಳಲ್ಲಿ 64.40ರ ಸರಾಸರಿಯೊಂದಿಗೆ 102.05ರ ಸ್ಟ್ರೈಕ್ ರೇಟ್‌ನಲ್ಲಿ 1739 ರನ್‌ಗಳಿಸಿದ್ದಾರೆ. ಇದರಲ್ಲಿ ಐದು ಶತಕ ಹಾಗೂ 8 ಅರ್ಧಶತಕ ಒಳಗೊಂಡಿದೆ. ಇತ್ತೀಚೆಗೆ ಮುಗಿದ ಏಷ್ಯಾಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಶುಭ್ಮನ್ ಗಿಲ್, ಟೂರ್ನಿಯಲ್ಲಿ ಅತ್ಯಧಿಕ ರನ್‌ಗಳಿಸಿದ ಬ್ಯಾಟರ್ ಎನಿಸಿದ್ದರು.
IND v AUS, Shubman Gill, Team India, Australia, ODI Cricket