ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಆಟಗಾರರು ಭರ್ಜರಿ ಸಿದ್ಧತೆಯಲ್ಲಿದ್ದು, ತಂಡದ ಬ್ಯಾಟಿಂಗ್ ಅಸ್ತ್ರವಾಗಿರುವ ವಿರಾಟ್ ಕೊಹ್ಲಿ ಸಹ ಕಾಂಗರೂ ಪಡೆಯ ಚಾಲೆಂಜ್ ಎದುರಿಸೋಕ್ಕೆ ಕಾಯುತ್ತಿದ್ದಾರೆ.
ಈ ಹಿಂದೆ 2014ರಲ್ಲಿ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ಸರಣಿಯಲ್ಲಿ ನಾಯಕನಾಗಿ ತಂಡವನ್ನ ಮುನ್ನಡೆಸಿದ್ದ ಕಿಂಗ್ ಕೊಹ್ಲಿ, ಈ ಬಾರಿ ಪರಿಪೂರ್ಣ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯುತ್ತಿದ್ದಾರೆ. ಆದರೆ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಲೀನ್ ಪಿಚ್ ಬಗ್ಗೆ ಸ್ವಲ್ಪಮಟ್ಟಿಗೆ ಚಿಂತೆ ಮಾಡುತ್ತಿದ್ದಾರೆ. ಕಾರಣ 2022ರ ಅಂತ್ಯದಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಎರಡು ಪಂದ್ಯಗಳಲ್ಲಿ ಆಡಿದ 4 ಇನ್ನಿಂಗ್ಸ್‌ಗಳಲ್ಲಿ 45 ರನ್‌ಗಳಿಸಲಷ್ಟೇ ಶಕ್ತರಾಗಿದ್ದರು. ಆದರೆ ಪ್ರತಿಬಾರಿಯೂ ಆಸ್ಟ್ರೇಲಿಯಾ ವಿರುದ್ಧ ಆಡಲು ಖುಷಿಪಡುವ ವಿರಾಟ್ ಕೊಹ್ಲಿ, ಮತ್ತೊಂದು ಭರ್ಜರಿ ಪ್ರದರ್ಶನ ನೀಡಲು ಸಜ್ಜಾಗಿ ಕಾಯುತ್ತಿದ್ದಾರೆ. ಆಸೀಸ್ ವಿರುದ್ಧ ವಿರಾಟ್ ಕೊಹ್ಲಿ ಈವರೆಗೆ ಆಡಿರುವ 20 ಟೆಸ್ಟ್ ಪಂದ್ಯಗಳಲ್ಲಿ 1682 ರನ್‌ಗಳಿಸಿದ್ದು, ಇದರಲ್ಲಿ 7 ಶತಕ ಕೂಡಿದೆ.
ಇನ್ನೂ ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ನಾಗ್ಪುರ ಅಂಗಳ ವೇದಿಕೆಯಾಗಿದ್ದು, ಈ ಮೈದಾನ ಕಿಂಗ್ ಕೊಹ್ಲಿ ಪಾಲಿಗೆ ಅತ್ಯಂತ ಫೇವರೆಟ್ ಆಗಿದೆ. ನಾಗ್ಪುರ ಮೈದಾನದಲ್ಲಿ ಈವರೆಗೂ ಆಡಿರುವ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 2 ಶತಕ ದಾಖಲಿಸಿದ್ದಾರೆ. ಇದು ವಿರಾಟ್ ಕೊಹ್ಲಿ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.
ನಾಗ್ಪುರ ಮೈದಾನದಲ್ಲಿ ಭಾರತದ ಪರ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ, 4 ಇನ್ನಿಂಗ್ಸ್‌ಗಳಲ್ಲಿ 357 ರನ್‌ಗಳಿಸಿದ್ದರೆ. ನಾಗ್ಪುರದ ರಾಜನಾಗಿ ಮುಂಚಿರುವ ರನ್ ಮಷಿನ್, 88ರ ಬ್ಯಾಟಿಂಗ್ ಸರಾಸರಿಯಲ್ಲಿ ಒಂದು ದ್ವಿಶತ ಹಾಗೂ ಒಂದು ಶತಕ ದಾಖಲಿಸಿದ್ದಾರೆ. ಇದೀಗ ಫೆ.9ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್‌ನಲ್ಲಿ ಕಿಂಗ್ ಕೊಹ್ಲಿ ಮತ್ತೊಂದು ಭರ್ಜರಿ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.
Team India, Australia, Virat Kohli, Nagpur, First Test, Border-Gavaskar Series, Sports Karnataka