ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯ ಇಂದು ನಡೆಯಲಿದ್ದು, ಈ ನಡುವೆ ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ 2ನೇ ಪಂದ್ಯದಿಂದ ಹೊರಗುಳಿದಿದ್ದಾರೆ. ಇವರ ಸ್ಥಾನಕ್ಕೆ ಯುವ ವೇಗದ ಬೌಲರ್ ಮುಖೇಶ್ ಕುಮಾರ್ ಬದಲಿ ಆಟಗಾರನಾಗಿ ತಂಡವನ್ನ ಸೇರಿಕೊಂಡಿದ್ದಾರೆ.
ಇಂಧೋರ್ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ ಹಿನ್ನೆಲೆಯಲ್ಲಿ ಉಭಯ ತಂಡಗಳ ಆಟಗಾರರು ಈಗಾಗಲೇ ಇಂಧೋರ್ಗೆ ಬಂದಿಳಿದಿದ್ದು, ನೆಟ್ಸ್ನಲ್ಲಿ ಅಭ್ಯಾಸ ಸಹ ನಡೆಸಿದ್ದಾರೆ. ಆದರೆ ಭಾರತ ತಂಡದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದು, ವೈಯಕ್ತಿಕ ಕಾರಣದಿಂದ ಟೀಂ ಇಂಡಿಯಾದ ಇತರೆ ಆಟಗಾರರೊಂದಿಗೆ ಜಸ್ಪ್ರೀತ್ ಬುಮ್ರಾ ಇಂಧೋರ್ಗೆ ತೆರಳಿಲ್ಲ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ತಮ್ಮ ಕುಟುಂಬವನ್ನ ಭೇಟಿಯಾಗುವ ಸಲುವಾಗಿ 2ನೇ ಪಂದ್ಯದಿಂದ ಬುಮ್ರಾ ಅವರಿಗೆ ತಂಡದ ಮ್ಯಾನೇಜ್ಮೆಂಟ್ ಬ್ರೇಕ್ ನೀಡಿದೆ. ಹೀಗಾಗಿ ಇಂಧೋರ್ನಲ್ಲಿ ನಡೆಯುವ ಇಂದಿನ ಪಂದ್ಯದಿಂದ ಹೊರಗುಳಿದಿರುವ ಬುಮ್ರಾ, ರಾಜ್ಕೋಟ್ನಲ್ಲಿ ನಡೆಯುವ ಏಕದಿನ ಸರಣಿಯ 3ನೇ ಹಾಗೂ ಅಂತಿಮ ಪಂದ್ಯಕ್ಕೆ ತಂಡವನ್ನ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮಾಹಿತಿ ಬಿಡುಗಡೆ ಮಾಡಿದೆ.
2ನೇ ಏಕದಿನ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಅಲಭ್ಯವಾಗಿರುವ ಕಾರಣ ಇವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಯುವ ವೇಗದ ಬೌಲರ್ ಮುಖೇಶ್ ಕುಮಾರ್ ಅವರನ್ನ ಆಯ್ಕೆ ಮಾಡಲಾಗಿದ್ದಾರೆ. ಅಲ್ಲದೇ ಈಗಾಗಲೇ ಇಂಧೋರ್ಗೆ ತಲುಪಿರುವ ಮುಖೇಶ್ ಕುಮಾರ್, ಟೀಂ ಇಂಡಿಯಾದ ಆಟಗಾರರನ್ನ ಕೂಡಿಕೊಂಡಿದ್ದಾರೆ. ಆದರೆ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಮೊಹಮ್ಮದ್ ಶಮಿ ಅವರೊಂದಿಗೆ ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್ ಅಥವಾ ಪ್ರಸಿದ್ಧ ಕೃಷ್ಣ ಅವರುಗಳು ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದ್ದು, ತಂಡದ ಮ್ಯಾನೇಜ್ಮೆಂಟ್ ಯಾರಿಗೆ ಅವಕಾಶ ನೀಡಲಿದೆ ಕಾದುನೋಡಬೇಕಿದೆ.
IND v AUS, Team India, Jasprit Bumrah, Mukesh Kumar, 2nd ODI