ಟೀಂ ಇಂಡಿಯಾದ “ಕೇರಂ ಬಾಲ್” ಸ್ಪೆಷಲಿಸ್ಟ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ 450ನೇ ವಿಕೆಟ್ ಕಬಳಿಸುವ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ಭಾರತೀಯ ಬೌಲರ್ ಎನಿಸಿದ್ದಾರೆ.
ನಾಗ್ಪುರದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ನ ಮೊದಲ ದಿನದಾಟದಲ್ಲಿ ಅಲೆಕ್ಸ್ ಕ್ಯಾರಿ ವಿಕೆಟ್ ಪಡೆಯುವ ಮೂಲಕ ಆರ್. ಅಶ್ವಿನ್ 450ನೇ ವಿಕೆಟ್ ಸಾಧನೆ ಬರೆದರು. 89ನೇ ಟೆಸ್ಟ್ ಪಂದ್ಯದಲ್ಲಿ 450 ಟೆಸ್ಟ್ ವಿಕೆಟ್ ಪಡೆಯುವ ಮೂಲಕ ಅನಿಲ್ ಕುಂಬ್ಳೆ ಅವರನ್ನ ಹಿಂದಿಕ್ಕಿದರು. ಕನ್ನಡಿಗ ಅನಿಲ್ ಕುಂಬ್ಳೆ ತಮ್ಮ 93ನೇ ಟೆಸ್ಟ್ ಪಂದ್ಯದಲ್ಲಿ 450 ವಿಕೆಟ್ ಪಡೆದಿದ್ದರು.
ಅಲ್ಲದೇ ವಿಶ್ವ ಕ್ರಿಕೆಟ್ನಲ್ಲಿ ವೇಗವಾಗಿ 450ನೇ ಟೆಸ್ಟ್ ವಿಕೆಟ್ ಕಬಳಿಸಿದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೂ ಸಹ ಅಶ್ವಿನ್ ಭಾಜನರಾದರು. ಶ್ರೀಲಂಕಾ ತಂಡದ ಮಾಜಿ ಆಟಗಾರ ಮುತ್ತಯ್ಯ ಮುರಳಿಧರನ್ 80 ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ವಿಶ್ವ ಕ್ರಿಕೆಟ್ನಲ್ಲಿ ಈಗಾಗಲೇ ಹಲವು ಬೌಲರ್ಗಳು 450 ವಿಕೆಟ್ಗಳ ಸಾಧನೆ ಮಾಡಿದ್ದು, ಇದೀಗ ಟೀಂ ಇಂಡಿಯಾದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 9ನೇ ಬೌಲರ್ ಆಗಿ 450ನೇ ಟೆಸ್ಟ್ ವಿಕೆಟ್ ಪಡೆದಿದ್ದಾರೆ.
Team India, Australia, Ravichandran Ashwin, Anil Kumble, Test Wicket, First Test