ಆತಿಥೇಯ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಸೋಲು ಕಂಡಿದೆ.
ತಂಡದ ಸೋಲಿಗೆ ಬ್ಯಾಟಿಂಗ್ ವೈಫಲ್ಯ ಕಾರಣವೆಂದರೂ ಫೀಲ್ಡಿಂಗ್ ಕೂಡ ಅಷ್ಟೆ ಮುಖ್ಯವಾಗಿತ್ತು.
ಕ್ರಿಕೆಟ್‍ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಅನ್ನೋ ಮಾತಿದೆ.ಈ ಮಾತು ಅಕ್ಷರಶಃ ಟೀಮ್ ಇಂಡಿಯಾಗೆ ಹೇಳಿದಂತಿದೆ.
ಯಾಕಂದ್ರೆ ವೇಗಿಗಾದ ಶಾರ್ದೂಲ್ ಠಾಕೂರ್ ಮತ್ತು ಕು¯ದೀಪ್ ಯಾದವ್ ಅವರುಗಳ ಅಧ್ಬುತ ಬೌಲಿಂಗ್‍ನಿಂದ ಸೌತ್ ಆಫ್ರಿಕಾ
ತಂಡವನ್ನು 249 ರನ್‍ಗಳಿಗೆ ಕಟ್ಟಿ ಹಾಕಿದರು. ತಂಡದ ಫೀಲ್ಡಿಂಗ್ ಚೆನ್ನಾಗಿದಿದ್ರೆ ಸೌತ್ ಆಫ್ರಿಕಾವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಬಹುದಿತ್ತು.
ಇನ್ನಿಂಗ್ಸ್ ಆರಂಭದಲ್ಲೆ ಶುಭಮನ್ ಗಿಲ್ ಮಲನ್ ಅವರ ಕ್ಯಾಚ್ ಅನ್ನು ಡ್ರಾಪ್ ಮಾಡಿದರು. 38ನೇ ಓವರ್‍ನಲ್ಲಿ ವೇಗಿ ಆವೇಶ್ ಖಾನ್ ಅವರ ಓವರ್‍ಗಳಲ್ಲಿ ಕ್ಲಾಸೆನ್ ಮತ್ತು ಮಿಲ್ಲರ್ ಅವರುಗಳು ನೀಡಿದ ಕ್ಯಾಚ್‍ಗಳನ್ನು ಕೈಚೆಲ್ಲಿದರು.
ಜೀವದಾನ ಪಡೆದ ಇಬ್ಬರು ಬೌಲರ್‍ಗಳು 30ಕ್ಕೂ ಹೆಚ್ಚು ರನ್ ಕಲೆ ಹಾಕಿದರು. ಡೆಬ್ಯು ಮಡಿದ ಋತುರಾಜ್ ಗಾಯಕ್ವಾಡ್ ಮತ್ತು ಇಶನ್ ಕಿಶನ್ ಕೂಡ ಕಳೆಪೆ ಫೀಲ್ಡಿಂಗ್ ಮಾಡಿ ರನ್ ಬಿಟ್ಟುಕೊಟ್ಟರು.ಟೀಮ್ ಇಂಡಿಯಾ ಮಾಡಿದ ತಪ್ಪುಗಳಿಂದ ಪಾಠ ಕಲಿತು ಚೆನ್ನಾಗಿ ಆಡಬೇಕಿದೆ.