ನ್ಯೂಜಿಲೆಂಡ್ನಲ್ಲಿ ನಡೆಯುವ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿಯ ಆರಂಭಕ್ಕೆ ಲೆಕ್ಕಾಚಾರ ಶುರುವಾಗಿದೆ. ಹಾಲಿ ರನ್ನರ್ ಅಪ್ ಭಾರತ ಈ ಬಾರಿ ಪ್ರಶಸ್ತಿ ಗೆಲ್ಲಬೇಕು ಅನ್ನುವ ಪ್ಲಾನ್ನಲ್ಲಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಯುತ್ತಿರುವುದರಿಂದ ಎಲ್ಲಾ ತಂಡಗಳು ತಲಾ 7 ಲೀಗ್ ಪಂದ್ಯಗಳನ್ನು ಆಡಲಿವೆ.
ಭಾರತ ತಂಡವನ್ನು ಅನುಭವಿ ಮಿಥಾಲಿ ರಾಜ್ ಮುನ್ನಡೆಸಲಿದ್ದಾರೆ. ಮಿಥಾಲಿಗೆ ಇದು ಬಹುಷಃ ಕೊನೆಯ ಏಕದಿನ ವಿಶ್ವಕಪ್ ಆಗುವ ಸಾಧ್ಯತೆ ಹೆಚ್ಚಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಮಾರ್ಚ್ 6 ರಂದು ಪಾಕ್ ವಿರುದ್ಧದ ಪಂದ್ಯದೊಂದಿಗೆ ಆರಂಭಿಸಲಿದೆ. ಈ ಪಂದ್ಯ ಮೌಂಟ್ ಮಂಗ್ನುಯಿಯಲ್ಲಿ ನಡೆಯಲಿದೆ.
ಮಾರ್ಚ್ 10ರಂದು ಭಾರತ ಹ್ಯಾಮಿಲ್ಟನ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಿದರೆ, ಮಾರ್ಚ್ 12 ರಂದು ಹ್ಯಾಮಿಲ್ಟನ್ನಲ್ಲೇ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಮಾರ್ಚ್ 16ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ಸವಾಲನ್ನು ಮೌಂಟ್ ಮಂಗ್ನುಯಿಯಲ್ಲಿ ಎದುರಿಸಲಿದೆ.
ಮಾರ್ಚ್ 19 ರಂದು ಆಕ್ಲಂಡ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯ ನಡೆದರೆ, ಮಾರ್ಚ್ 22 ರಂದು ಹ್ಯಾಮಿಲ್ಟನ್ನಲ್ಲಿ ಭಾರತ- ಬಾಂಗ್ಲಾದೇಶ ಪಂದ್ಯ ನಡೆಯಲಿದೆ. ಭಾರತ ತನ್ನ ಅಂತಿಮ ಲೀಗ್ ಪಂದ್ಯವನ್ನು ಮಾರ್ಚ್ 28ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕ್ರೈಸ್ಟ್ ಚರ್ಚ್ನಲ್ಲಿ ಆಡಲಿದೆ.
ಅಂಕಪಟ್ಟಿಯಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿದೆ. ಈ ಬಾರಿಯ ಟೂರ್ನಿಯಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ , ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕಪ್ ಗೆಲ್ಲುವ ನೆಚ್ಚಿನ ತಂಡಗಳಾಗಿವೆ.