ಭಾರತ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಐಸಿಸಿ ಟೆಸ್ಟ್ ರಾಂಕಿಂಗ್‍ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ.
ಐಸಿಸಿ ಬೌಲರ್‍ಗಳ ಟೆಸ್ಟ್ ರಾಂಕಿಂಗ್‍ಬಿಡುಗಡೆ ಮಾಡಿದೆ. ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ 91ರನ್ ನೀಡಿ 6 ವಿಕೆಟ್ ಪಡೆದಿದ್ದರು. ಬಾರ್ಡರ್ ಗವಸ್ಕರ್ ಟ್ರೋಫಿಯಲ್ಲಿ ಒಟ್ಟು 25 ವಿಕೆಟ್ ಪಡೆದಿದ್ದರು. ಇದೀಗ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್‍ಗಿಂತ 10 ಅಂಕ ಮುಂದಿದ್ದಾರೆ.
ನಂ.1 ಸ್ಥಾನಕ್ಕಾಗಿ ಅಶ್ವಿನ್, ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್ ಮತ್ತು ಆಸಿಸ್ ನಾಯಕ ಪ್ಯಾಟ್ ಕಮಿನ್ಸ್ ಜತೆ ಪೈಪೋಟಿ ನಡೆಸಿದ್ದರು.
ಕೆಲವು ದಿನಗಳ ಹಿಂದೆಯಷ್ಟೆ ಜೇಮ್ಸ್ ಆ್ಯಂಡರ್ಸನ್, ಅಶ್ವಿನ್ ಜತೆ ನಂ.1 ಸ್ಥಾನ ಹಂಚಿಕೊಂಡಿದ್ದರು. ಇದೀಗ ಅಶ್ವಿನ್ ಭಾರೀ ಅಂತರ ಕಾಯ್ದುಕೊಂಡು ಅಗ್ರಪಟ್ಟ ಪಡೆದಿದ್ದಾರೆ.
ಮತ್ತೋರ್ವ ಆಲ್ರೌಂಡರ್ ಅಕ್ಸರ್ ಪಟೇಲ್ ಆರು ಸ್ಥಾನ ಜಿಗಿದಿದ್ದಾರೆ. ಆಲ್ರವಂಡರ್ ವಿಭಾಗದಲ್ಲಿ ನಾಲ್ಕನೆ ಸ್ಥಾನ ಪಡೆದಿದ್ದಾರೆ.
ಅಕ್ಸರ್ ಪಟೇಲ್ ಬಾರ್ಡರ್ ಗವಸ್ಕಾರ್ ಟ್ರೋಫಿಯಲ್ಲಿ ರನ್ ಮಳೆ ಸುರಿಸಿದ್ದಾರೆ. ಒಟ್ಟು 264 ರನ್ ಹೊಡೆದು ಸರಣಿಯಲ್ಲಿ ಮೂರನೆ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿದ್ದಾರೆ.
ಆಸಿಸ್ ತಂಡದ ಉಸ್ಮಾನ್ ಖವಾಜ ಮತ್ತು ವಿರಾಟ್ ಕೊಹ್ಲಿ ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡಿದ್ದಾರೆ.
ಬ್ಯಾಟಿಂಗ್ ರ್ಯಾಂಕಿಂಗ್‍ನಲ್ಲಿ ಅಕ್ಸರ್ ಪಟೇಲ್ 8 ಸ್ಥಾನ ಜಿಗಿದು 44ನೇ ಸ್ಥಾನ ಪಡೆದಿದ್ದಾರೆ.
ವೇಗಿ ಜಸ್ಪ್ರೀತ್ ಬೂಮ್ರ ಆಡದ ಕಾರಣ ಏಳನೆ ಸ್ಥಾನಕ್ಕೆ ಕುಸಿದಿದ್ದಾರೆ.
ಅಹಮದಾಬದ್ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಮಿಂಚಿದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟಿಂಗ್ ರಾಂಕ್‍ನಲ್ಲಿ 7ನೇ ಸ್ಥಾನ ಜಿಗಿದು 13 ಸ್ಥಾನ ಪಡೆದಿದ್ದಾರೆ.
ವಿರಾಟ್ ಕೊಹ್ಲಿ ಮೂರು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‍ನಲ್ಲಿ ಶತಕ ಸಿಡಿಸಿದ್ದಾರೆ. ಅಹಮದಾಬಾದ್ ಟೆಸ್ಟ್ ಶತಕದಿಂದ ವಿರಾಟ್ ಕೊಹ್ಲಿ ರ್ರಾಂಕಿಂಗ್‍ನಲ್ಲಿ ಏರಿಕೆ ಕಂಡಿದ್ದಾರೆ.
ರಿಷಬ್ ಪಂತ್ (9ನೇ ಸ್ಥಾನ) ಮತ್ತು ರೋಹಿತ್ ಶರ್ಮಾ (10ನೇ ಸ್ಥಾನ) ಪಡೆದಿದ್ದಾರೆ.