ಟಿ-20 ವಿಶ್ವಕಪ್ 2022- ಟೀಮ್ ಇಂಡಿಯಾದ ವೇಳಾಪಟ್ಟಿ
ಇದು ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಸುದ್ದಿ. ಯಾಕಂದ್ರೆ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುವ ಕ್ರಿಕೆಟ್ ಪಂದ್ಯವನ್ನು ನೋಡುವುದೇ ಒಂದು ರೀತಿಯ ರೋಚಕ.
ಬದ್ಧ ವೈರಿಗಳಂತೆ ಕಾದಾಟ ನಡೆಯುವ ಈ ಎರಡು ದೇಶಗಳ ಪಂದ್ಯವನ್ನು ನೋಡಲು ಇಡೀ ಕ್ರಿಕೆಟ್ ಜಗತ್ತೇ ಕಾತರದಿಂದ ಕಾಯುತ್ತಿದೆ. ಉಭಯ ತಂಡಗಳು ಸೋಲನ್ನು ಒಪ್ಪಿಕೊಳ್ಳಲು ರೆಡಿ ಇಲ್ಲ. ಗೆಲುವೇ ಮೂಲ ಮಂತ್ರ. ಹೀಗಾಗಿ ಇಂಡೋ ಪಾಕ್ ಫೈಟ್ ಕೇವಲ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರವಲ್ಲ. ಜಾಹಿರಾತು ಕಂಪೆನಿಗಳಿಗೂ, ಟಿವಿ ಪ್ರಸಾರ ಹಕ್ಕನ್ನು ಪಡೆದಿರುವ ಸಂಸ್ಥೆಗೂ ಬಂಪರ್ ಕೊಡುಗೆಯಾಗುತ್ತಿದೆ.
ಇದೀಗ 2022ರ ಟಿ-20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. ಆಸ್ಟ್ರೇಲಿಯಾ ಆತಿಥ್ಯ ವಹಿಸುತ್ತಿರುವ ಈ ಟೂರ್ನಿ ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೆ ನಡೆಯಲಿದೆ.
ಬಿ ಗುಂಪಿನಲ್ಲಿರುವ ಭಾರತ ತನ್ನ ಮೊದಲ ಪಂದ್ಯವನ್ನೇ ಪಾಕಿಸ್ತಾನ ವಿರುದ್ಧ ಆಡಲಿದೆ. ಕಳೆದ ವಿಶ್ವಕಪ್ ಟೂರ್ನಿಯಲ್ಲೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ಐಸಿಸಿ ವಿಶ್ವಕಪ್ ಟಿ-20 ಮತ್ತು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿ ಸೋಲು ಅನುಭವಿಸಿತ್ತು.
ಇದೀಗ ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಮ್ ಇಂಡಿಯಾಗೆ ಅವಕಾಶ ಸಿಕ್ಕಿದೆ. ಇನ್ನೊಂದೆಡೆ ಗೆಲುವನ್ನು ಮುಂದುವರಿಸಿಕೊಂಡು ಹೋಗುವ ಇರಾದೆ ಪಾಕಿಸ್ತಾನ ತಂಡಕ್ಕೂ ಇದೆ.
ಮೆಲ್ಬರ್ನ್ ಅಂಗಣದಲ್ಲಿ ಅಕ್ಟೋಬರ್ 23ರಂದು ನಡೆಯಲಿರುವ ಈ ಪಂದ್ಯವನ್ನು ವಿಶ್ವ ಕ್ರಿಕೆಟ್ ಪಂಡಿತರು ಹೈ ವೋಲ್ಟೇಜ್ ಪಂದ್ಯ ಅಂತನೇ ಬಣ್ಣಿಸುತ್ತಿದ್ದಾರೆ.
ಅದೇನೇ ಇರಲಿ, ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿಗಳು ನಡೆಯದೇ ಅದೆಷ್ಟೋ ವರ್ಷಗಳು ಕಳೆದಿವೆ. ಹೀಗಾಗಿ ಈ ಪಂದ್ಯ ಹೆಚ್ಚು ರೋಚಕತೆಯನ್ನು ಪಡೆದುಕೊಂಡಿದೆ.
ಬಿ ಗುಂಪಿನಲ್ಲಿ ಭಾರತ ತಂಡ ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶದ ಸವಾಲುಗಳನ್ನು ಎದುರಿಸಬೇಕಿದೆ. ಇನ್ನುಳಿದ ಎರಡು ಪಂದ್ಯಗಳನ್ನು ಎ ಗುಂಪಿನ ರನ್ನರ್ ಅಪ್ ಮತ್ತು ಬಿ ಗುಂಪಿನ ವಿನ್ನರ್ ತಂಡದ ವಿರುದ್ಧ ಟೀಮ್ ಇಂಡಿಯಾ ಆಡಲಿದೆ
ಟಿ-20 ವಿಶ್ವಕಪ್ 2022 – ಟೀಮ್ ಇಂಡಿಯಾದ ವೇಳಾಪಟ್ಟಿ
ಅಕ್ಟೋಬರ್ 23- ಪಾಕಿಸ್ತಾನ – ಮೆಲ್ಬರ್ನ್
ಅಕ್ಟೋಬರ್ 27 – ಗ್ರೂಪ್ ಎ ರನ್ನರ್ ಅಪ್ – ಸಿಡ್ನಿ
ಅಕ್ಟೋಬರ್ 30- ದಕ್ಷಿಣ ಆಫ್ರಿಕಾ – ಪರ್ತ್
ನವೆಂಬರ್ -2 – ಬಾಂಗ್ಲಾದೇಶ – ಆಡಿಲೇಡ್
ನವೆಂಬರ್ -6- ಗ್ರೂಪ್ ಬಿ ವಿನ್ನರ್ – ಮೆಲ್ಬರ್ನ್