ICC Month Award ಟಿ20 ವಿಶ್ವಕಪ್ನಲ್ಲಿ ರನ್ ಮಳೆ ಸುರಿಸುತ್ತಿರುವ ರನ್ ಮಷೀನ್ ವಿರಾಟ್ ಕೊಹ್ಲಿ ಐಸಿಸಿ ತಿಂಗಳ ಆಟಗಾರನ ಪ್ರಶಸ್ತಿಗೆ ಇದೆ ಮೊದಲ ಬಾರಿಗೆ ನಾಮ ನಿರ್ದೇಶನಗೊಂಡಿದ್ದಾರೆ.
ಕೊಹ್ಲಿ ಜೊತೆ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ ಹಾಗೂ ಜಿಂಬಾಬ್ವೆ ತಂಡದ ಆಲ್ರೌಂಡರ್ ಸಿಕಂದರ್ ರಾಝಾ ಕೂಡ ನಾಮ ನಿರ್ದೇಶನಗೊಂಡಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಭಾರತದ ತಂಡದ ಅದ್ಭುತ ಪ್ರದರ್ಶನ ಹಿಂದೆ ವಿರಾಟ್ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ಇದೆ. ಮೊದಲ ಪಂದ್ಯದಲ್ಲಿ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಅಜೇಯ 82 ರನ್, ನೆದರ್ ಲೆಂಡ್ ವಿರುದ್ದ 62 ರನ್, ಬಾಂಗ್ಲಾ ವಿರುದ್ಧವೂ ಅರ್ಧ ಶತಕ ಸಿಡಿಸಿದ್ದಾರೆ.
ಡೇವಿಡ್ ಮಿಲ್ಲರ್ ಮೊನ್ನೆ ಭಾರತ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಇದಕ್ಕೂ ಮುನ್ನ ಭಾರತದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದರು.
ಉಭಯ ಸರಣಿಯಲ್ಲಿ ಮಿಲ್ಲರ್ ಏಕದಿನ ಸರಣಿಯಲ್ಲಿ 117 ರನ್, ಎರಡು ಟಿ20 ಪಂದ್ಯಗಳಿಂದ 125 ರನ್ ಮತ್ತು ಗುವಾಹಟಿಯಲ್ಲಿ 79 ಎಸೆತದಲ್ಲಿ 106 ರನ್ ಸಿಡಿಸಿದ್ದರು.
ಇನ್ನು ಜಿಂಬಾಬ್ವೆ ತಂಡದ ಸಿಕಂದರ್ ರಾಝಾ ತಂಡವನ್ನು ಸೂಪರ್ 12ಗೆ ಹೋಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮೊನ್ನೆ ಬಲಿಷ್ಠ ಪಾಕಿಸ್ತಾನ ವಿರುದ್ಧ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಸಿಕಂದರ್ ಕಳೆದ 6 ಟಿ20 ಪಂದ್ಯಗಳಿಂದ 145 ರನ್ ಗಳಿಸಿ 9 ವಿಕೆಟ್ ಪಡೆದಿದ್ದಾರೆ. 3 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.