ಮಳೆಯಿಂದಾಗಿ ಭಾರತ-ಪಾಕ್ ಪಂದ್ಯ ರದ್ದಾದರೆ ಐಸಿಸಿಗೆ 581 ಕೋಟಿ ರೂ. ನಷ್ಟ
ಭಾನುವಾರ ಮೆಲ್ಬೋರ್ನ್ ನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯದ ರೋಚಕತೆ ಹೆಚ್ಚಿಸುತ್ತಿದೆ. ಅಕ್ಟೋಬರ್ 23 ರಂದು ಮೆಲ್ಬೋರ್ನ್ ನಲ್ಲಿ 70 ರಿಂದ 80 ರಷ್ಟು ಮಳೆ ಬೀಳುವ ನಿರೀಕ್ಷೆಯಿದೆ. ಒಂದು ವೇಳೆ ಮಳೆಯಾದರೆ ಐಸಿಸಿಗೆ ಭಾರಿ ನಷ್ಟವಾಗಲಿದೆ.
ಸ್ಥಳೀಯ ವರದಿಗಳ ಪ್ರಕಾರ ಭಾರತ-ಪಾಕ್ ಪಂದ್ಯ ರದ್ದಾದರೆ ಐಸಿಸಿಗೆ ಸುಮಾರು 70 ಮಿಲಿಯನ್ ಡಾಲರ್ ಅಂದರೆ 581 ಕೋಟಿ ರೂಪಾಯಿ ನಷ್ಟವಾಗಲಿದೆ. ಟಿ-20 ವಿಶ್ವಕಪ್‌ನ ಪ್ರಶಸ್ತಿ ಪಂದ್ಯಕ್ಕಿಂತಲೂ ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಪಂದ್ಯದ ಟಿಕೆಟ್‌ಗಳು ಬಿಡುಗಡೆಯಾದ ತಕ್ಷಣ ಮಾರಾಟವಾಗಿವೆ. ಆದರೆ ಫೈನಲ್‌ಗೆ ಟಿಕೆಟ್‌ಗಳು ಇನ್ನೂ ಲಭ್ಯವಿವೆ. ಇದರಿಂದ ಅಭಿಮಾನಿಗಳು ಎಷ್ಟು ಕಾತರದಿಂದ ಕಾಯುತ್ತಿದ್ದಾರೆ ಎಂಬುದನ್ನು ಊಹಿಸಬಹುದು.
ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ ಭಾರತ ತಂಡ ಬೆವರು ಸುರಿಸಿತ್ತಿದೆ. ಆಟಗಾರರು ಮಳೆಯ ಬಗ್ಗೆ ಯೋಚಿಸುತ್ತಿಲ್ಲ. ಅವರು ಹುರುಪಿನಿಂದ ತಯಾರಿಯಲ್ಲಿ ನಿರತರಾಗಿದ್ದಾರೆ. ಬಿಸಿಸಿಐ ಅಭ್ಯಾಸದ ಫೋಟೋಗಳನ್ನು ಶನಿವಾರ ಬಿಡುಗಡೆ ಮಾಡಿದೆ. ಐಸಿಸಿ ಆರರಿಂದ ಎಂಟು ತಿಂಗಳ ಹಿಂದೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತದ ಆಟಗಾರರು ನಗರ ಪ್ರವಾಸಕ್ಕೆ ತೆರಳಿದ್ದರು. ಶುಕ್ರವಾರ ಆಟಗಾರರು ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ 1.30ರಿಂದ ಅಭ್ಯಾಸ ನಡೆಸಿದರು. ನಂತರ ತಂಡವು ಮೆಲ್ಬೋರ್ನ್ ಸರ್ಕಾರಿ ಭವನವನ್ನು ತಲುಪಿತು. ಈ ವೇಳೆ ಆಟಗಾರರು ನೊಬೆಲ್ ಪ್ರಶಸ್ತಿ ವಿಜೇತರ ಫೋಟೋಗಳನ್ನು ನೋಡಿದರು. ‘ಸರ್ಕಾರಿ ಭವನ’ವು ವಿಕ್ಟೋರಿಯಾ ರಾಜ್ಯದ ರಾಜ್ಯಪಾಲರ ಅಧಿಕೃತ ನಿವಾಸವಾಗಿದೆ.
ICC, India, Pakistan, Rain, T-20 World Cup