ಪಾಕಿಸ್ತಾನ ಮಾಜಿ ಸ್ಪಿನ್ನರ್ ಅಬ್ದುಲ್ ಖಾದರ್, ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ದಂತಕತೆ ಶಿವನರೈನ್ ಚಂದ್ರಪಾಲ್ ಮತ್ತು ಇಂಗ್ಲೆಂಡ್ನ ಮಹಿಳಾ ವಿಶ್ವಕಪ್ ವಿಜೇತ ನಾಯಕಿ ಶಾರ್ಲೊಟ್ ಎಡ್ವರ್ಡ್ಸ್ ಪ್ರತಿಷ್ಠಿತ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಐಸಿಸಿ ಹಾಲ್ ಆಫ್ ಗೌರವಕ್ಕೆ ಆಯ್ಕೆ ಪ್ರಕ್ರಿಯೆ ಮತದಾನದ ಮೂಲಕ ನಡೆಯುತ್ತದೆ. ಹಾಲ್ ಆಫ್ ಫೇಮ್ ಪಡೆದ ವಿಜೇತರು. ಎಫ್ಐಸಿಎ ಹಿರಿಯ ಕಾರ್ಯನಿರ್ವಹಕರು,ಮಾಧ್ಯಮ ಪ್ರತಿನಿಧಿಗಳು ಮತದಾನದಿಂದ ಆಯ್ಕೆ ನಡೆದಿದೆ.
ರಿಸ್ಟ್ ಸ್ಪಿನ್ನರ್ ಆಗಿದ್ದ ಅಬ್ದುಲ್ ಖಾದರ್ ಮೂರು ವರ್ಷಗಳ ಹಿಂದೆ ಕೊನೆಯುಸಿರೆಳೆದಿದ್ದಾರೆ. 13 ವರ್ಷಗಳ ಕ್ರಿಕೆಟ್ನಲ್ಲಿ 67 ಟೆಸ್ಟ್,104 ಏಕದಿನ ಪಂದ್ಯಗಳಿಂದ ಕ್ರಮವಾಗಿ 236 ಮತ್ತು 132 ವಿಕೆಟ್ ಪಡೆದಿದ್ದಾರೆ.
ವೆಸ್ಟ್ಇಂಡೀಸ್ ದಂತಕತೆ ಚಂದ್ರಪಾಲ್ ಆಲ್ ಟೈಮ್ ಟೆಸ್ಟ್ ರನ್ ಪಟ್ಟಿಯಲ್ಲಿ ಎಂಟನೆ ಸ್ಥಾನ ಪೆಡೆದಿದ್ದಾರೆ. ಟೆಸ್ಟ್ನಲ್ಲಿ ಸತತ 7 ಅರ್ಧ ಶತಕಗಳನ್ನು ಸಿಡಿಸಿದ ದಾಖಲೆ ಹೊಂದಿದ್ದಾರೆ. 164 ಟೆಸ್ಟ್ ಮತ್ತು 268 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಶಾರ್ಲೊಟ್ ಎಡ್ವರ್ಡ್ಸ್ ಎರಡು ದಶಕಗಳ ಕಾಲ ಕ್ರಿಕೆಟ್ ಆಡಿ 2009 ಏಕದಿನ ವಿಶ್ವಕಪ್ ಅದೆ ವರ್ಷ ತಂಡಕ್ಕೆ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ಕೊಡಿಸಿದ್ದಾರೆ.