ದೀಪಕ್ ಭೋರಿಯಾ (51ಕೆಜಿ), ಮೊಹ್ಮದ್ ಹುಸ್ಮಾದ್ದೀನ್ (57ಕೆಜಿ) ಮತ್ತು ನಿಶಾಂತ್ ದೇವ್ (71ಕೆಜಿ) ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ ಈ ಬಾರಿಯ ಅತ್ಯುತ್ತಮ ಪ್ರರ್ದಶನ ಇದಾಗಿದೆ.
ಭರವಸೆಯ ಬಾಕ್ಸರ್ಗಳಾದ ಹುಸ್ಮಾದ್ದೀನ್ ಮತ್ತು ನಿಶಾಂತ್ ಸೆಮಿಫೈನಲ್ನಲ್ಲಿ ಬಲಿಷ್ಠ ಎದುರಾಳಿಗಳನ್ನು ಎದುರಿಸಿ ಸೋತರು. ದೀಪಕ್ ಬಿಲಾಲ್ ಬೆನ್ನಾಮಾ ವಿರುದ್ಧ ಕಠಿಣ ಹೋರಾಟ ನೀಡಿ 3-4 ಅಂಕಗಳಿಂದ ಮಣಿದರು.
ನಿಶಾಂತ್ 2022ರ ಏಷ್ಯನ್ ಚಾಂಪಿಂಯನ್ ಕಜಿಕಿಸ್ತಾನದ ಶೈಮಿಬೆರ್ಗೆನೊವ್ ವಿರುದ್ಧ ಸೋತರು.ಮತ್ತೋರ್ವ ಬಾಕ್ಸರ್ ಹುಸ್ಮಾದ್ದೀನ್ ಗಾಯಗೊಂಡು ಹೊರ ನಡೆದಿದ್ದರಿಂದ ಕಂಚಿಗೆ ತೃಪ್ತಿಪಡಬೇಕಾಯಿತು.
ಐಬಿಎ ಬಾಕ್ಸಿಂಗ್ನ ಪದಕ ವಿಜೇತರು
ವಿಜೇಂದರ್ ಸಿಂಗ್ (2009;ಕಂಚು), ವಿಕಾಸ್ ಕೃಷ್ಣನ್ (ಕಂಚು, 2011),ಶಿವ ಥಾಪ(ಕಂಚು: 2015), ಗೌರವ್ (ಕಂಚು: 2017), ಮನೀಶ್ ಕೌಶಿಕ್ (ಕಂಚು:2019), ಅಮಿತ್ ಪಾಂಗಲ್ (ಬೆಳ್ಳಿ : 2019)ಮತ್ತು ಆಕಾಶ್ ಕುಮಾರ್ (ಕಂಚು; 2021).