ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯನ್ನು ಈಗಷ್ಟೇ ಮುಗಿಸಿದೆ. ಆದರೆ ಅದಾಗಲೇ ಇಂಗ್ಲೆಂಡ್ ಟೂರ್, ಐರ್ಲೆಂಡ್ ಟೂರ್ ಅನ್ನುವ ಎರಡು ಎರಡು ಸರಣಿಗೆ ಟೀಮ್ ಇಂಡಿಯಾ ಸಿದ್ದವಾಗಿದೆ. ಐರ್ಲೆಂಡ್ನಲ್ಲಿ ಟೀಮ್ ಇಂಡಿಯಾವನ್ನು ಹಾರ್ದಿಕ್ ಪಾಂಡ್ಯಾ ಮುನ್ನಡೆಸಿದ್ರೆ, ಇಂಗ್ಲೆಂಡ್ನಲ್ಲಿ ರೋಹಿತ್ ಶರ್ಮಾ ತಂಡವನ್ನು ಲೀಡ್ ಮಾಡಲಿದ್ದಾರೆ.
ಐರ್ಲೆಂಡ್ ಪ್ರವಾಸ ಟೀಮ್ ಇಂಡಿಯಾದ ಪಾಲಿಗೆ ಸುಲಭ ಸವಾಲು ಎಂದು ನಿರೀಕ್ಷೆ ಮಾಡಲಾಗಿದೆ. ಆದರೆ ಐರ್ಲೆಂಡ್ ಕೂಡ ಹೋರಾಟ ಮಾಡಬಲ್ಲದು ಅನ್ನುವುದನ್ನು ಮರೆಯುವ ಹಾಗಿಲ್ಲ. ಅಂದು ಹಾಗೇ ಐರ್ಲೆಂಡ್ನಲ್ಲಿ ಭಾರತ 2 ಟಿ20 ಪಂದ್ಯಗಳನ್ನು ಆಡಲಿದೆ. ಮೇಲ್ನೋಟಕ್ಕೆ ಇದು ಚುಟುಕು ಸರಣಿಯಾದರೂ, ಇದರ ಹಿಂದೆ ಟಿ20 ವಿಶ್ವಕಪ್ ಲೆಕ್ಕಾಚಾರ ಅಡಗಿದೆ.
ಐರ್ಲೆಂಡ್ ವಿರುದ್ಧ ಮೊದಲ ಪಂದ್ಯ ಜೂನ್ 26ರಂದು ನಡೆಯಲಿದೆ. ಡಬ್ಲಿನ್ನಲ್ಲಿ ನಡೆಯುವ ಈ ಪಂದ್ಯ ಸರಣಿಯ ಆರಂಭಿಕ ಪಂದ್ಯವಾಗಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದರೆ ಅರ್ಧ ಕೆಲಸ ಮುಗಿದಂತೆಯೇ.
2ನೇ ಪಂದ್ಯವೂ ಡಬ್ಲಿನ್ನಲ್ಲೇ ನಡೆಯಲಿದೆ. ಜೂನ್ 28ರಂದು ಈ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 8ಕ್ಕೆ ಈ ಪಂದ್ಯ ನಡೆಯಲಿದೆ.
ಐರ್ಲೆಂಡ್ನಲ್ಲಿ ಟೀಮ್ ಇಂಡಿಯಾದ ಆಟಗಾರರಿಗೆ ಟಿ 20 ತಂಡದಲ್ಲಿ ಸ್ಥಾನಪಡೆದುಕೊಳ್ಳಲು ಉತ್ತಮ ಅವಕಾಶವನ್ನು ನೀಡಲಿದೆ.