Sreesanth – 9 ವರ್ಷಗಳ ಬಳಿಕ ಮೊದಲ ವಿಕೆಟ್ – ಪಿಚ್ ಗೆ ಶ್ರೀಶಾಂತ್ ದಂಡ ನಮಸ್ಕಾರ..!

ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಮಾತು ಸುಳ್ಳಲ್ಲ. ಈ ಮಾತು ಕೇರಳ ಎಕ್ಸ್ ಪ್ರೆಸ್ ಖ್ಯಾತಿಯ ಶ್ರೀಶಾಂತ್ ಗೆ ಚೆನ್ನಾಗಿ ಅನ್ವಯಿಸುತ್ತದೆ.
ಶ್ರೀಶಾಂತ್ ಅಂದ ತಕ್ಷಣ ನೆನಪಾಗೋದು ಆಕ್ರಮಣಕಾರಿ ಪ್ರವೃತ್ತಿಯ ಬೌಲರ್. ಮೈದಾನದಲ್ಲಿ ಒರಟ. ಮುಂಗೋಪಿ. ವಿಕೆಟ್ ಸಿಕ್ಕಿದಾಗ ಅಂತೂ ಶ್ರೀಶಾಂತ್ ಅವರನ್ನು ಕಂಟ್ರೋಲ್ ಮಾಡೋದು ತುಂಬಾ ಕಷ್ಟ. ಎದುರಾಳಿ ಬ್ಯಾಟ್ಸ್ ಮೆನ್ ಗಳ ವಿರುದ್ಧ ವಾಕ್ಸಮರ, ನಾನಾ ಚೇಷ್ಟೆ ಮಾಡುತ್ತಾ ಬೌಲಿಂಗ್ ಮಾಡುವ ಶ್ರೀಶಾಂತ್ ಅದ್ಭುತ ಬೌಲರ್ ಎಂಬುದರಲ್ಲಿ ಎರಡು ಮಾತಿಲ್ಲ.
ಆದ್ರೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪ ಶ್ರೀಶಾಂತ್ ಕ್ರಿಕೆಟ್ ಬದುಕಿಗೆ ಕಂಟಕವಾಗಿ ಪರಿಣಮಿಸಿತ್ತು. ನಾನು ಆಟಕ್ಕೆ ಮೋಸ ಮಾಡಿಲ್ಲ ಅಂತ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದ ಶ್ರೀಶಾಂತ್ ಕೊನೆಗೂ ಗೆಲುವು ಸಾಧಿಸಿದ್ದರು. ಆದ್ರೆ ಮತ್ತೆ ಟೀಮ್ ಇಂಡಿಯಾಗೆ ಬರಲು ಸಾಧ್ಯವಾಗಲಿಲ್ಲ. ಐಪಿಎಲ್ ಗೂ ಎಂಟ್ರಿಕೊಟ್ಟಿಲ್ಲ. ಆದ್ರೂ ಶ್ರೀಶಾಂತ್ ಪರ ಹಠ ಬಿಟ್ಟಿಲ್ಲ. ಟೀಮ್ ಇಂಡಿಯಾ ಮತ್ತು ಐಪಿಎಲ್ ನಲ್ಲಿ ಆಡಲೇಬೇಕು ಎಂಬ ಛಲದಲ್ಲಿದ್ದಾರೆ. How Sreesanth picked his first wicket after nine years in Ranji Trophy 2022
https://twitter.com/i/status/1499011301276004352
ಇದಕ್ಕಾಗಿ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇದೀಗ ಶ್ರೀಶಾಂತ್ ಮತ್ತೆ ಸುದ್ದಿಯಲ್ಲಿದ್ದಾರೆ. ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಶ್ರೀಶಾಂತ್ 9 ವರ್ಷಗಳ ಬಳಿಕ ಮೊದಲ ವಿಕೆಟ್ ಪಡೆದುಕೊಂಡಿದ್ದಾರೆ.
ಈ ಪಂದ್ಯದಲ್ಲಿ ಶ್ರೀಶಾಂತ್ ವಿಕೆಟ್ ಪಡೆದುಕೊಂಡಾಗ ಕೂಲ್ ಆಗಿಯೇ ಇದ್ರು. ಯಾವುದೇ ಸಂಭ್ರಮಪಡಲಿಲ್ಲ. ಅಂಪೈರ್ ಔಟ್ ನೀಡುವ ಮುನ್ನವೇ ಔಟ್ ಅಂತ ಶ್ರೀಶಾಂತ್ ಅಂಪೈರ್ ಬಳಿ ಶಾಂತವಾಗಿಯೇ ಕೈಬೆರಳನ್ನು ಮೇಲೆತ್ತಿದ್ದರು. ಅಂಪೈರ್ ಔಟ್ ಅಂತ ತೀರ್ಪು ನೀಡುತ್ತಿದ್ದಂತೆ ಸಹ ಆಟಗಾರರು ಬಂದು ಶ್ರೀಶಾಂತ್ ಅವರನ್ನು ಅಭಿನಂದಿಸಿದ್ರು. ಆಗಲೂ ಶ್ರೀಶಾಂತ್ ತಾಳ್ಮೆಯಿಂದಲೇ ಇದ್ರು. ಜೊತೆಗೆ ಪಿಚ್ ಗೆ ದಂಡ ನಮಸ್ಕಾರ ಮಾಡಿದ್ದರು.
9 ವರ್ಷಗಳ ಬಳಿಕ ವಿಕೆಟ್ ಪಡೆದ ಖುಷಿಯನ್ನು ಶ್ರೀಶಾಂತ್ ಅವರು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ದೇವರ ಆಶೀರ್ವಾದ. 9 ವರ್ಷಗಳ ಬಳಿಕ ಮೊದಲ ವಿಕೆಟ್ ಪಡೆದಿದ್ದೇನೆ. ಮೊದಲ ವಿಕೆಟ್ ಪಡೆದಿರುವುದಕ್ಕೆ ನನ್ನ ಪ್ರಣಾಮಗಳು ಎಂದು ಶ್ರೀಶಾಂತ್ ಬರೆದುಕೊಂಡಿದ್ದಾರೆ. ಜೊತೆಗೆ ಮೊದಲ ವಿಕೆಟ್ ಪಡೆದ ವಿಡಿಯೋ ಕೂಡ ಶೇರ್ ಮಾಡಿಕೊಂಡಿದ್ದಾರೆ.