Hockey – ಭಾರತ ಹಾಕಿ ತಂಡದ ಐದು ಮಂದಿಗೆ ಕೋವಿಡ್ ಸೋಂಕು..!

ಬೆಂಗಳೂರಿನಲ್ಲಿ ತರಬೇತಿ ನಡೆಸುತ್ತಿರುವ ಭಾರತ ಹಾಕಿ ತಂಡದ ಐದು ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾ ಕೂಟಕ್ಕೆ ಭಾರತ ಪುರುಷರ ಹಾಕಿ ತಂಡ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ನಡೆಸುತ್ತಿತ್ತು. ಈ ತರಬೇತಿ ಶಿಬಿರ ಜುಲೈ 23ರಿಂದ ಆರಂಭವಾಗಿತ್ತು.
ಭಾರತ ಹಾಕಿ ತಂಡದ ಪ್ರಮುಖ ಸ್ಟ್ರೈಕರ್ ಗುರ್ಜಂತ್ ಸಿಂಗ್, ಹೆಡ್ ಕೋಚ್ ಗ್ರಹಮ್ ರೇಡ್ ಸೇರಿದಂತೆ ಇಬ್ಬರು ಅಟಗಾರರು ಮತ್ತು ಮೂವರು ಸಿಬ್ಬಂದಿಗಳಿಗೆ ಕೋವಿಡ್ ಸೋಕು ಇರೋದು ಪತ್ತೆಯಾಗಿದೆ. Hockey – COVID-19 hits men’s hockey team
ಬುಧವಾರ ಭಾರತ ಹಾಕಿ ತಂಡದ ಸದಸ್ಯರಿಗೆ ಆರ್ ಟಿಪಿಸಿಆರ್ ಟೆಸ್ಟ್ ನಡೆಸಲಾಗಿತ್ತು. ಹೀಗಾಗಿ ಕೋವಿಡ್ ಪಾಸಿಟಿವ್ ಆಗಿರುವ ಐದು ಮಂದಿಯನ್ನು ಐಸೋಲೇಷನ್ ನಲ್ಲಿಡಲಾಗಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಒಟ್ಟು 31 ಮಂದಿ ತರಬೇತಿ ನಡೆಸುತ್ತಿದ್ದಾರೆ. ಎಫ್ ಐಎಚ್ ಪ್ರೋ ಲೀಗ್ ಟೂರ್ನಿಯ ನಂತರ ಭಾರತ ಪುರುಷರ ಹಾಕಿ ತಂಡ ಬೆಂಗಳೂರಿನಲ್ಲಿ ತರಬೇತಿ ಶಿಬಿರದಲ್ಲಿ ಭಾಗಿಯಾಗಿತ್ತು.
ಈಗಾಗಲೇ ದೇಶಾದ್ಯಂತ 18, 819 ಹೊಸ ಕೋವಿಡ್ ಕೇಸ್ ಗಳು ಪತ್ತೆಯಾಗಿವೆ.