ಸ್ಥಿರ ಪ್ರದರ್ಶನ ನೀಡುತ್ತಿರುವ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಇಂದು ಸನ್‍ರೈಸರಸ್ ತಂಡವನ್ನು ಎದುರಿಸಲಿದೆ. ಇಂದಿನ ಪಂದ್ಯವನ್ನು ಗೆದ್ದರೆ ಗುಜರಾತ್ ನೇರವಾಗಿ ಪ್ಲೇ ಆಫ್ಗೆ ಅರ್ಹತೆ ಪಡೆಯುವ ಮೊದಲ ತಂಡವಾಗಲಿದೆ.
ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಸನ್‍ರೈಸರ್ಸ್ 11 ಪಂದ್ಯಗಳಿಂದ 4 ಪಮದ್ಯಗಳನ್ನು ಗೆದ್ದುಕೊಂಡಿದೆ.
ಮೊನ್ನೆ ಮುಂಬೈ ವಿರುದ್ಧ ರಶೀದ್ ಖಾನ್ ಹೊರತುಪಡಿಸಿ ತಂಡದ ಬೌಲರ್‍ಗಳು ವೈಫಲ್ಯ ಅನುಭವಿಸಿದರು.
ಮುಂಬೈ ವಿರುದ್ಧ ಗುಜರಾತ್ ಟೈಟಾನ್ಸ್ ಸೋತಿದ್ದರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ.ತಪ್ಪುಗಳಿಂದ ಪಾಠ ಕಲಿತಿದೆ.
ಟೈಟಾನ್ಸ್ ಅಗ್ರ ಬ್ಯಾಟರ್‍ಗಳು ವೈಫಲ್ಯ ಅನುಭವಿಸಿದರು. ಎಂಟನೆ ಕ್ರಮಾಂಕದಲ್ಲಿ ರಶೀದ್ ಖಾನ್ ಸೋಟಕ ಬ್ಯಾಟಿಂಗ್ ಮಾಡಿ ಎಲ್ಲರಿಂದ ಮೆಚ್ಚುಗೆ ಪಡೆದರು.
ವೇಗಿ ಮೊಹ್ಮದ್ ಶಮಿ ಹೊಸ ಚೆಂಡಿನಲ್ಲಿ ಮತ್ತೆ ಮಿಂಚಿಬೇಕಿದೆ. ವೇಗಿ ಮೋಹಿತ್ ಶರ್ಮಾ ಮಧ್ಯಮ ಮತ್ತು ಡೆತ್ ಓವರ್‍ಗಳಲ್ಲಿ ವಿಕೆಟ್ ಪಡೆದಿಲ್ಲ.
ಸನ್‍ರೈಸರ್ಸ್ ಮೊನ್ನೆ ಲಖನೌ ವಿರುದ್ಧ ಸೋತಿತ್ತು. ಕೊನೆಯ ಓವರ್‍ಗಳಲ್ಲಿ 80 ರನ್‍ಗಳನ್ನು ರಕ್ಷಿಸಿಕೊಳ್ಳಲು ಆಗಲಿಲ್ಲ.
ಅಗ್ರ ಕ್ರಮಾಂಕದಲ್ಲಿ ಅನಮೋಲ್‍ಪ್ರೀತ್ ಸಿಂಗ್ ಮತ್ತು ಮಯಾಂಕ್ ಅಗರ್‍ವಾಲ್ ವೈಫಲ್ಯ ಅನುಭವಿಸಿದ್ದಾರೆ. ರಾಹುಲ್ ತ್ರಿಪಾಠಿ 11 ಪಂದ್ಯಗಳಿಂದ 199 ರನ್ ಸಿಡಿಸಿದ್ದಾರೆ. ಏಡಿನ್ ಮಾರ್ಕ್‍ರಮ್ 10 ಪಂದ್ಯಗಳಿಂದ 207 ರನ್ ಕಲೆ ಹಾಕಿದ್ದಾರೆ.
ವೇಗಿ ಉಮ್ರಾನ್ ಮಲ್ಲಿಕ್ ಏ.20ರಂದು ಕೊನೆಯ ಬಾರಿಗೆ ಆಡಿದ್ದರು. ಅಬ್ದುಲ್ ಸಮಾದ್ ಪ್ರದರ್ಶನ ತಂಡಕ್ಕೆ ಭರವಸೆ ನೀಡಿದೆ.