ಭಾರತದ ಸ್ಟಾರ್ ಆಟಗಾರ ಲಕ್ಷ್ಯ ಸೇನ್ ಅವರು ಜರ್ಮನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ. ವಿಶ್ವದ ನಂಬರ್ 1 ಆಟಗಾರ ವಿಕ್ಟರ್ ಆಕ್ಸೆಲ್ಸೆನ್ ಅವರನ್ನು ಉಪಾಂತ್ಯ ಪಂದ್ಯದಲ್ಲಿ ಸೋಲಿಸಿ ಜಿದ್ದು ಗೆದ್ದಿದ್ದಾರೆ.
ಶನಿವಾರ ನಡೆದ ಸೆಮೀಸ್ ಕಾದಾಟದಲ್ಲಿ ಸೊಗಸಾದ ಪ್ರದರ್ಶನ ನೀಡಿದ ಲಕ್ಷ್ಯ ಸೇನ್ ಅಬ್ಬರಿಸಿದರು. ಮೊದಲ ಗೇಮ್ ನಲ್ಲಿ ಲಕ್ಷ್ಯ ಸೇನ್ ಅವರು ಸೊಗಸಾದ ಪ್ರದರ್ಶನ ನೀಡಿ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿದರು. ಈ ಅವಧಿಯಲ್ಲಿ ಸತತ 5 ಅಂಕಗಳನ್ನು ಕಲೆ ಹಾಕಿದ ಇವರು ಮೊದಲ ಗೇಮ್ ನಲ್ಲಿ ಗೆಲುವು ದಾಖಲಿಸಿದರು.
ಎರಡನೇ ಗೇಮ್ ನಲ್ಲಿ ಲಕ್ಷ್ಯ ಸೇನ್ ಆರಂಭದಲ್ಲಿ ಅಂಕ ಗಳಿಕೆಯಲ್ಲಿ ಮುನ್ನಡೆ ಸಾಧಿಸಿದರೂ, ವಿಕ್ಟರ್ ಆಕ್ಸೆಲ್ಸೆನ್ ಪುಟಿದೆದ್ದರು. ಅಲ್ಲದೆ 8-8 ಅಂಕಗಳಿಂದ ಸಮಬಲದಿಂದ ಸಾಧಿಸಿದ್ದ ಪಂದ್ಯದಲ್ಲಿ ಜಯ ಸಾಧಿಸಿದರು.
ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಉಭಯ ಆಟಗಾರರು ಆರಂಭದಲ್ಲಿ ಅಂಕಗಳನ್ನು ಸುಲಭವಾಗಿ ನೀಡಲಿಲ್ಲ. ಪರಿಣಾಮ ಜಿದ್ದಾಜಿದ್ದಿನ ಕಾದಾಟದಲ್ಲಿ ಭಾರತದ ಆಟಗಾರ ಧೃತಿ ಗೆಡದೆ ಆರ್ಭಟಿಸಿದರು. ಲಕ್ಷ್ಯ ಸೇನ್ ಕೊನೆಯವರೆಗೂ ಹಾಕಿಕೊಂಡ ಯೋಜನೆಗೆ ಪೂರಕವಾಗಿ ಆಡಿ ಜಯ ಸಾಧಿಸಿದರು.