ಮಾಜಿ ವಿಶ್ವ ಚಾಂಪಿಯನ್ ಕಿದಂಬಿ ಶ್ರೀಕಾಂತ್ ಇಂದಿನಿಂದ ಆರಂಭವಾಗಲಿರುವ ಜರ್ಮನ್ ಓಪನ್ ಟೂರ್ನಿಯಿಂದ ಹೊರ ನಡೆದಿದ್ದಾರೆ.
ಕಿದಂಬಿ ಶ್ರೀಕಾಂತ್ ಈ ಬಾರಿ ಆಡುತ್ತಿಲ್ಲ. ಕಳೆದ ಆವೃತ್ತಿಯಲ್ಲಿ ಫೈನಲಿಸ್ಟ್ ಆಗಿದ್ದ ಮತ್ತೋರ್ವ ಯುವ ಆಟಗಾರ ಲಕ್ಷ್ಯ ಸೇನ್ ಕಣಕ್ಕಿಳಿಯಲಿದ್ದಾರೆ. ನೂತನ ರಾಷ್ಟ್ರೀಯ ಚಾಂಪಿಯನ್ ಮಿಥುನ್ ಮಂಜುನಾಥ್ ಕೂಡ ತಂಡದಲ್ಲಿದ್ದಾರೆ.
ಮಹಿಳಾ ಸಿಂಗಲ್ಸ್‍ನಲ್ಲಿ ಮಾಳವಿಕಾ ಬಾನಸೂದ್ ಮತ್ತು ಸೈನಾ ನೆಹ್ವಾಲ್ ಆಡಲಿದ್ದಾರೆ.
ಕಳೆದ ಬಾರಿ ಸೆಮಿಫೈನಲ್‍ನಲ್ಲಿ ಲಕ್ಷ್ಯಸೇನ್ ವಿಶ್ವದ ನಂ.1 ಆಟಗಾರ ವಿಕ್ಟೊರ್ ಆ್ಯಕ್ಸಲೆಸೆನ್ ಅವರನ್ನು ಸೋಲಿಸಿದ್ದರು. ಮಿಶ್ರ ಡಬಲ್ಸ್‍ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸುಮಿತ್ ರೆಡ್ಡಿ ಆಡಲಿದ್ದಾರೆ.