ಐಪಿಎಲ್ ಗೆ ಗೌತಮ್ ಗಂಭಿರ್ ರೀ ಎಂಟ್ರಿ.. ಬಟ್ Gautam Gambhir sports karnataka
15 ನೇ ಆವೃತ್ತಿ ಇಂಡಿಯಲ್ ಪ್ರಿಮಿಯರ್ ಲೀಗ್ ಗಾಗಿ ಫ್ರಾಂಚೈಸಿಗಳು ತಯಾರಿ ಆರಂಭಿಸಿದ್ದು, ಮುಂದಿನ ಆವೃತ್ತಿಯಿಂದ ಐಪಿಎಲ್ ನಲ್ಲಿ ಹೊಸ ತಂಡಗಳು ಪಾಲ್ಗೊಳ್ಳುತ್ತಿರುವುದರಿಂದ ಟೂರ್ನಿ ಮತ್ತಷ್ಟು ರಸವತ್ತಾಗಲಿದೆ.
ಮುಂದಿನ ವರ್ಷದ ಐಪಿಎಲ್ ನಲ್ಲಿ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಅದೃಷ್ಠ ಪರೀಕ್ಷೆಗೆ ಇಳಿಯಲಿವೆ.
ಈ ಪೈಕಿ ಲಕ್ನೋ ಫ್ರಾಂಚೈಸಿ ಪಕ್ಕಾ ಲೆಕ್ಕಾಚಾರದೊಂದಿಗೆ ಐಪಿಎಲ್ ಸಂಗ್ರಾಮಕ್ಕೆಇಳಿಯಲು ಪ್ಲಾನ್ ಮಾಡುತ್ತಿದೆ.
ಮೆಗಾ ಹಜಾರಿನಲ್ಲಿ ಆಟಗಾರರ ಖರೀದಿ ಬಗ್ಗೆ ತಯಾರಿ ನಡೆಸುತ್ತಿರುವ ಲಕ್ನೋ, ಇದೀಗ ಕೋಚ್, ಮೆಂಟರ್ ನೇಮಕ ಮಾಡುವ ಕೆಲಸದಲ್ಲಿ ತೊಡಗಿದೆ.
ಸಂಜೀವ್ ಗೊಯಾಂಕಾ ಗ್ರೂಪ್ ನೇತೃತ್ವದ ಲಕ್ನೋ ಫ್ರಾಂಚೈಸಿ, ಜಿಂಬಾಬೆ ಮಾಜಿ ನಾಯಕ ಆಂಡಿ ಫ್ಲವರ್ ಅನ್ನು ತಂಡದ ಕೋಚ್ ಆಗಿ ನೇಮಕ ಮಾಡಿದೆ.
ಇದೀಗ ಟೀಂ ಇಂಡಿಯಾ ಮಾಜಿ ಆಟಗಾರ, ಸಂಸದ ಗೌತಮ್ ಗಂಭೀರ್ ಅವರನ್ನು ತಂಡದ ಮೆಂಟರ್ ಆಗಿ ನೇಮಕ ಮಾಡಿಕೊಂಡಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಸಂಜೀವ್ ಗೊಯಂಕಾ ಕ್ರಿಕ್ ಬಜ್ ಜೊತೆ ಮಾತನಾಡುತ್ತಾ, ಹೌದು..! ನಾವು ಗಂಭೀರ್ ಅವರನ್ನ ಮೆಂಟರ್ ಆಗಿ ನೇಮಕ ಮಾಡಿಕೊಂಡಿದ್ದೇವೆ.
ಕ್ರಿಕೆಟರ್ ಆಗಿ ಅವರು ಎಷ್ಟೋ ದಾಖಲೆಗಳನ್ನು ಬರೆದಿದ್ದಾರೆ. ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ಅವರ ಜೊತೆ ಕೆಲಸ ಮಾಡಲು ನಾನು ತುಂಬಾ ಆಸಕ್ತಿಯಿಂದ ಇದ್ದೇನೆ ಎಂದಿದ್ದಾರೆ.
ಇನ್ನು ಗಂಭೀರ್ ಈ ವಿಚಾರವಾಗಿ ಮಾತನಾಡುತ್ತಾ.. ನನಗೆ ಈ ಅವಕಾಶ ಕೊಟ್ಟಿದ್ದಕ್ಕಾಗಿ ಆರ್ ಪಿಎಸ್ ಜಿ ಗ್ರೂಪ್, ಡಾಕ್ಟರ್ ಗೊಯಂಕಾ ಅವರಿಗೆ ಧನ್ಯವಾದ ಎಂದಿದ್ದಾರೆ.
ಅಲ್ಲದೇ ಸ್ಪರ್ಧೆಯಾವುದೇ ಇರಲಿ ಗೆಲ್ಲಬೇಕು ಅನ್ನೋ ಹಠ ನನ್ನಲ್ಲಿ ಹಾಗೇ ಇದೆ. ಸಂಪೂರ್ಣ ಬದ್ಧತೆಯಿಂದ ನಾನು ನನ್ನ ಕೆಲಸವನ್ನು ನಿರ್ವಹಿಸುತ್ತೇನೆ ಎಂದಿದ್ದಾರೆ ಗೌತಮ್.
ಇನ್ನು ಲಕ್ನೋ ಫ್ರಾಂಚೈಸಿ ಸ್ಟಾರ್ ಆಟಗಾರರಿಗೆ ಮಣೆ ಹಾಕುತ್ತಿರುವು ಅಲ್ಲದೇ ತಂಡ ಬ್ರ್ಯಾಂಡ್ ಹೆಚ್ಚಿಸುವ ಆಟಗಾರರ ಮೇಲೆ ಕಣ್ಣಿಟ್ಟಿದೆ.
ಇದರ ಭಾಗವಾಗಿಯೇ ಸದ್ಯ ಟೀಂ ಇಂಡಿಯಾದಲ್ಲಿ ಮಿಂಚು ಹರಿಸುತ್ತಿರುವ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಬುಟ್ಟಿಗೆ ಹಾಕಿಕೊಂಡಿದೆ.
ಅಲ್ಲದೇ ರಾಹುಲ್ ಅವರಿಗೆ ತಂಡದ ನಾಯಕತ್ವ ವಹಿಸಿ ಬ್ರ್ಯಾಂಡ್ ಹೆಚ್ಚಿಸಿಕೊಳ್ಳಲು ಪ್ಲಾನ್ ಮಾಡುತ್ತಿದೆ.
ಲಕ್ನೋ, ಕೆ ಎಲ್ ರಾಹುಲ್ ಜೊತೆಗೆ ಅಪ್ಘಾನ್ ನ ರಶೀದ್ ಖಾನ್ , ಯುವ ಆಟಗಾರ ಇಶಾನ್ ಕಿಶನ್ ಮೇಲೆ ಕಣ್ಣಿಟ್ಟಿದೆ.