Gary Balance ಶತಕ, ಈ ಸಾಧನೆ ಮಾಡಿದ ವಿಶ್ವದ ಎರಡನೇ ಬ್ಯಾಟರ್
ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಜಿಂಬಾಬ್ವೆ ಬ್ಯಾಟ್ಸ್ಮನ್ ಗ್ಯಾರಿ ಬ್ಯಾಲೆನ್ಸ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಗ್ಯಾರಿ ಭರ್ಜರಿ ಬ್ಯಾಟಿಂಗ್ನಲ್ಲಿ ಶತಕ ಬಾರಿಸಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ನ 447 ರನ್ ಬೆನ್ನಟ್ಟಿದ ತಂಡಕ್ಕೆ ಸಂಕಷ್ಟಕ್ಕೆ ಅದ್ಭುತ ಬ್ಯಾಟಿಂಗ್ ಮಾಡಿ ಶತಕ ಗಳಿಸಿದರು. ವಿಶೇಷವೆಂದರೆ ಈ ಅನುಭವಿ ಬ್ಯಾಟ್ಸ್ ಮನ್ ಕೂಡ ಸಿಕ್ಸರ್ ಬಾರಿಸುವ ಮೂಲಕ ಶತಕ ಪೂರೈಸಿದರು.
99 ರನ್ಗಳಿಂದ ಆಟವಾಡುತ್ತಿದ್ದ ಗ್ಯಾರಿ ಬ್ಯಾಲೆನ್ಸ್ 110ನೇ ಓವರ್ನಲ್ಲಿ ಗುಡಾಕೇಶ್ ಮೋಟೆ ಅವರ ಎಸೆತದಲ್ಲಿ ಅದ್ಭುತ ಸಿಕ್ಸರ್ ಬಾರಿಸಿದರು. ಈ ಅವಧಿಯಲ್ಲಿ ಗ್ಯಾರಿ ಬ್ಯಾಲೆನ್ಸ್ 9 ಬೌಂಡರಿ-2 ಸಿಕ್ಸರ್ ಬಾರಿಸಿದ್ದರು.
ಗ್ಯಾರಿ ಬ್ಯಾಲೆನ್ಸ್ ಟೆಸ್ಟ್ ವೃತ್ತಿಜೀವನದಲ್ಲಿ ಎರಡು ದೇಶಗಳಿಗಾಗಿ ಶತಕಗಳನ್ನು ಗಳಿಸಿದ ವಿಶ್ವದ ಎರಡನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಕೆಪ್ಲರ್ ವೆಸೆಲ್ಸ್ ಕೂಡ ಎರಡು ದೇಶಗಳ ಪರ ಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ವಾಸ್ತವವಾಗಿ, ಗ್ಯಾರಿ ಮೊದಲು ಇಂಗ್ಲೆಂಡ್ಗಾಗಿ ಆಡುತ್ತಿದ್ದರು, ಆದರೆ ಇತ್ತೀಚೆಗೆ ಅವರು ಜಿಂಬಾಬ್ವೆಗಾಗಿ ತಮ್ಮ ಕ್ರಿಕೆಟ್ ವೃತ್ತಿಜೀವನದ ಎರಡನೇ ಇನ್ನಿಂಗ್ಸ್ ಅನ್ನು ಪ್ರಾರಂಭಿಸಲು ನಿರ್ಧರಿಸಿದರು. ಜಿಂಬಾಬ್ವೆ ಪರ ಪದಾರ್ಪಣೆ ಮಾಡಿದ ಗ್ಯಾರಿ ತಮ್ಮ ಟೆಸ್ಟ್ ವೃತ್ತಿಜೀವನದ ಐದನೇ ಶತಕ ದಾಖಲಿಸಿದರು.
ಇಂಗ್ಲೆಂಡ್ನ ಮಾಜಿ ಬ್ಯಾಟ್ಸ್ಮನ್ ಗ್ಯಾರಿ ಬ್ಯಾಲೆನ್ಸ್ ಜಿಂಬಾಬ್ವೆಯಲ್ಲಿ ಜನಿಸಿದರು. ಇಂಗ್ಲೆಂಡ್ ಪರ ಆಡಿದ ಬಳಿಕ ತನ್ನ ದೇಶದ ಪರ ಆಡುವ ಅವಕಾಶ ಸಿಕ್ಕಿತು. ಅವರು ಜಿಂಬಾಬ್ವೆಯೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಬ್ಯಾಲೆನ್ಸ್ 2014 ರಲ್ಲಿ ಇಂಗ್ಲೆಂಡ್ಗಾಗಿ ಟೆಸ್ಟ್ಗೆ ಪಾದಾರ್ಪಣೆ ಮಾಡಿದರು. ಆದರೆ 2017 ರಿಂದ ಇಂಗ್ಲೆಂಡ್ಗಾಗಿ ಟೆಸ್ಟ್ ಕ್ರಿಕೆಟ್ ಆಡಿಲ್ಲ. ಅಂದಿನಿಂದ ಕೌಂಟಿ ಕ್ರಿಕೆಟ್ ಆಡುತ್ತಿದ್ದರು. ಬ್ಯಾಲೆನ್ಸ್ ಟೆಸ್ಟ್ ಕ್ರಿಕೆಟ್ಗೆ ಹಿಂದಿರುಗುವ ಮೊದಲು ಐರ್ಲೆಂಡ್ ವಿರುದ್ಧ T20I ಮತ್ತು ಕೆಲವು ODIಗಳನ್ನು ಆಡಿದ್ದಾರೆ. ಇದರಲ್ಲಿ ಅವರ ತಂಡ ಗೆದ್ದಿತು. ಎರಡು ದೇಶಗಳ ಪರ ಆಡುತ್ತಿರುವ ವಿಶ್ವದ 16ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
Gary Ballance, Zimbabwe, West Indies, Test,