French Open : ಭಾರತದ ತಾರಾ ಬ್ಯಾಡ್ಮಿಂಟನ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪ್ರತಿಷ್ಠಿತ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಮುಡಿಗೇರಿಸಿಕೊಂಡಿದ್ದಾರೆ.
ಡಬಲ್ಸ್ ವಿಭಾಗದಲ್ಲಿ ಫ್ರೆಂಚ್ ಓಪನ್ ಗೆದ್ದ ಮೊದಲ ಜೋಡಿಯಾಗಿದೆ.
ಪ್ಯಾರಿಸ್ ನಲ್ಲಿ ನಡೆದ ಪುರುಷರ ಡಬಲ್ಸ್ ಫೈನಲ್ ನಲ್ಲಿ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಚೀನಾ ತೈಪೈ ಲೂ ಚಿಂಗ್ ಯಾಹೊ ಹಾಗೂ ಯಾಂಗ್ ಪೊ ಹಾನ್ ವಿರುದ್ಧ 21-13, 21-19 ಅಂಕಗಳಿಂದ ಮಣಿಸಿದರು.
2019ರ ಆವೃತ್ತಿಯಲ್ಲಿ ಸಾತ್ವಿಕ್- ಚಿರಾಗ್ ಫ್ರೆಂಚ್ ಓಪನ್ ಟೂರ್ನಿಯ ರನ್ನರ್ ಅಪ್ ಆಗಿದ್ದಾರೆ. ಈ ವರ್ಷ ಸಾತ್ವಿಕ್- ಚಿರಾಗ್ ಜೋಡಿ ಇಂಡಿಯನ್ ಓಪನ್ ಸೂಪರ್, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಹಾಗೂ ವಿಶ್ವಚಾಂಪಿಯನ್ ಶಿಪ್ನಲ್ಲಿ ಕಂಚು ಗೆದ್ದಿದ್ದಾರೆ.
ಸಾತ್ವಿಕ್ ಹಾಗೂ ಚಿರಾಗ್ ಜೋಡಿ ಫ್ರೆಂಚ್ ಓಪನ್ ಗೆಲ್ಲುವ ಮೂಲಕ ಮೂರನೆ ವಿಶ್ವ ಪದಕ ಗೆದ್ದ ಸಾಧನೆ ಮಾಡಿದ್ದಾರೆ. 2019ರಲ್ಲಿ ಥಾಯ್ಲೆಂಡ್ ಓಪನ್ 2022ರಲ್ಲಿ ಇಂಡಿಯನ್ ಓಪನ್ ಗೆದ್ದಿದ್ದಾರೆ.