French Open Badminton- ಪ್ರತಿಷ್ಠಿತ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸಾತ್ವಿಕ್ ಸೈರಾಜ್ ಹಾಗೂ ಚಿರಾಗ್ ಶೆಟ್ಟಿ ಜೋಡಿ ವಿಶ್ವದ ನಂ.1 ಜೋಡಿಯನ್ನು ಸೋಲಿಸಿದೆ.
ಶುಕ್ರವಾರ ಪ್ಯಾರಿಸ್ನಲ್ಲಿ ನಡೆದ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಜೋಡಿ ಜಪಾನ್ನ ವಿಶ್ವದ ನಂ.1 ಜೋಡಿಯಾದ ಟಾಕುರೊ ಹೋಕಿ ಹಾಗೂ ಯುಗೊ ಕೊಬಾ ಯಶ್ ಜೋಡಿಯನ್ನು 230-21, 21-18 ಅಂಕಗಳಿಂದ ಮಣಿಸಿತು.
ಈ ಗೆಲುವಿನೊಂದಿಗೆ ಸಾತ್ವಿಕ್ ಹಾಗೂ ಚಿರಾಗ್ ಜೋಡಿ ಸೆಮಿಫೈನಲ್ ಪ್ರವೇಶಿಸಿತು.
ಕಠಿಣ ಸರ್ವಗಳ ಮೂಲಕ ಚಿರಾಗ್ ಶೆಟ್ಟಿ ಎದುರಾಳಿ ಮೇಲೆ ಒತ್ತಡ ಹಾಕಿದರು.16-20 ರಿಂದ ಹಿನ್ನಡೆ ಅನುಭವಿಸಿದ್ದ ತಂಡಕ್ಕೆ 20-20 ಅಂಕ ಸಮಾನ ಮಾಡುವಲ್ಲಿ ಯಶಸ್ವಿಯಾದರು.
ಚಿರಾಗ್ ಎದುರಾಳಿಗಳ ಸವಾಲನ್ನು ದಿಟ್ಟವಾಗಿ ಎದುರಿಸಿದರು. ಮೊದಲ ಸೆಟ್ ಅನ್ನು 23-21 ಅಂಕಗಳಿಂದ ಗೆದ್ದರು.
ಸೆಮಿಫೈನಲ್ ನಲ್ಲಿ ಭಾರತದ ಜೋಡಿ ಚೊಯ್ ಸೊಲ್ ಗ್ಯೂ ಹಾಗೂ ಕಿಮ್ ವೊನ್ ವೂ ಜೋಡಿಯನ್ನು ಎದುರಿಸಲಿದೆ.