French Open – ಯುವ ಬ್ಯಾಡ್ಮಿಂಟನ್ ಆಟಗಾರ ಸಮೀರ್ ವರ್ಮಾ ವಿಶ್ವದ 6ನೇ ರಾಂಕ್ ಆಟಗಾರ ಆ್ಯಂಟೋನಿ ಗಿಂಟಿಂಗ್ ಅವರನ್ನು ಸೋಲಿಸಿ ಅಚ್ಚರಿ ಮೂಡಿಸಿದ್ದಾರೆ.
ಫ್ರೆಂಚ್ ಓಪನ್ ಟೂರ್ನಿಯಲ್ಲಿ ಶ್ರೇಯಾಂಕ ರಹಿತ ಆಟಗಾರ ಸಮೀರ್ ವರ್ಮಾ 6ನೇ ಶ್ರೇಯಾಂಕಿತ ಆಟಗಾರ ಆ್ಯಂಟೋನಿ ಗಿಂಟಿಂಗ್ ವಿರುದ್ಧ 21-15, 21-23, 22-20 ಅಂಕಗಳಿಂದ ಮಣಿಸಿತು.
ಕಳೆದ ಮಾರ್ಚ್ ನಲ್ಲಿ ಸ್ವೀಸ್ ಓಪನ್ ನಲ್ಲಿ ಗಿಂಟಿಂಗ್ ವಿರುದ್ಧ ಸೋತಿದ್ದ ಸೇಡನ್ನು ಸಮೀರ್ ವರ್ಮಾ ತೀರಿಸಿಕೊಂಡರು. ಇದೀಗ ಸಮೀರ್ ಹಾಗೂ ಗಿಂಟಿಂಗ್ 2-2 ಸಮಬಲ ಗೆಲುವುಗಳ ದಾಖಲೆ ಹೊಂದಿದ್ದಾರೆ.
ಮುಂದೆ ಸಮೀರ್ ವರ್ಮಾ ಎರಡನೆ ಸುತ್ತಿನಲ್ಲಿ ಥಾಯ್ ಲೆಂಡ್ನ ಕುನ್ಲಾವುಟ್ ವಿಟಿಸಾರನ್ ವಿರುದ್ಧ ಹೋರಾಡಲಿದ್ದಾರೆ.
ಭಾರತದ ಮತ್ತೊರ್ವ ತಾರಾ ಆಟಗಾರ ಎಚ್.ಎಸ್ ಪ್ರಣಯ್ ಮಲೇಷ್ಯಾದ ಲೀವ್ ಡರೆನ್ ವಿರುದ್ಧ 21-16, 16-21, 21-16 ಅಂಕಗಳಿಂದ ಮಣಿಸಿದರು.
ಪ್ರಣಯ್ ಚೀನಾದ ಲೂ ಗಾಂಗ್ ಜೂ ಅವರನ್ನು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್ ವಿಭಾಗದಲ್ಲಿ ಅರ್ಜುನ್ ಹಾಗೂ ಧ್ರುವ ಕಪಿಲಾ ಜೋಡಿ ಮೊದಲ ಸುತ್ತಿನಲ್ಲಿ ಇಂಡೋನೇಷ್ಯಾದ ಫಾಜರ್ ಅಲಫಿಯಾನ್ ಹಾಗೂ ಮುಹ್ಮದ್ ರಿಯಾನ್ ವಿರುದ್ಧ 15-21, 16-21 ಅಂಕಗಳಿಂದ ಸೋಲು ಕಂಡಿತು.