ಆರ್ಸಿಬಿಯ ಸ್ಟಾರ್ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೊನ್ನೆ ಸುತ್ತಿ ನಿರಾಸೆ ಅನುಭವಿಸಿದರು. ಈ ಪಂದ್ಯದಲ್ಲಿ ಆರ್ಸಿಬಿ 37 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ವಿರಾಟ್ ಕೊಹ್ಲಿ ಮತ್ತು ನಾಯಕ ಡು ಪ್ಲೆಸಿಸ್ ಪೆವಿಲಿಯನ್ಗೆ ಮರಳಿದ್ದರು. ಇಂತಹ ಪರಿಸ್ಥಿತಿಯಲ್ಲಿ ಮ್ಯಾಕ್ಸ್ ವೆಲ್ ಮೇಲೆ ತಂಡ ಭಾರೀ ನಿರೀಕ್ಷೆ ಇಟ್ಟುಕೊಂಡಿತ್ತು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಗ್ಲೇನ್ ಕುಲದೀಪ್ ಸೇನ್ಗೆ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದರು. ಈ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ನಂತರ, ಮ್ಯಾಕ್ಸ್ವೆಲ್ ಐಪಿಎಲ್ನಲ್ಲಿ ಶೂನ್ಯಕ್ಕೆ ಅತಿ ಹೆಚ್ಚು ಬಾರಿ ಔಟಾದ ವಿದೇಶಿ ಬ್ಯಾಟ್ಸ್ಮನ್ ಎನಿಸಿಕೊಂಡರು.
ಮ್ಯಾಕ್ಸ್ವೆಲ್ ರಾಜಸ್ಥಾನದ ವಿರುದ್ಧ ಖಾತೆ ತೆರೆಯದೆ ಔಟಾದರು. ಈ ಲೀಗ್ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಐಪಿಎಲ್ನಲ್ಲಿ ಇದುವರೆಗೆ 11 ಬಾರಿ ಶೂನ್ಯಕ್ಕೆ ಔಟಾದ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಮ್ಯಾಕ್ಸ್ವೆಲ್ ಹಿಂದಿಕ್ಕಿದ್ದಾರೆ. ಈಗ ರಶೀದ್ ಖಾನ್ ಐಪಿಎಲ್ನಲ್ಲಿ ವಿದೇಶಿ ಆಟಗಾರನಾಗಿ ಶೂನ್ಯಕ್ಕೆ ಔಟಾದ ವಿಷಯದಲ್ಲಿ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಗ್ಲೇನ್ ಮ್ಯಾಕ್ಸ್ವೆಲ್ ನಂಬರ್ ಒನ್ ಸ್ಥಾನಕ್ಕೆ ಬಂದಿದ್ದಾರೆ.
IPL ನಲ್ಲಿ ಅತಿ ಹೆಚ್ಚು ಬಾರಿ ಸೊನ್ನೆ ಸುತ್ತಿದ ವಿದೇಶಿ ಆಟಗಾರರು
12 – ಗ್ಲೇನ್ ಮ್ಯಾಕ್ಸ್ವೆಲ್
11 – ರಶೀದ್ ಖಾನ್
10 – ಸುನಿಲ್ ನರೈನ್
10 – ಎಬಿ ಡಿವಿಲಿಯರ್ಸ್
9 – ಕ್ರಿಸ್ ಮೋರಿಸ್
9 – ಜ್ಯಾಕ್ ಕಾಲಿಸ್
ಈ ಪಂದ್ಯದಲ್ಲಿ RCB ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಿಯಾನ್ ಪರಾಗ್ ಅವರ ಅಜೇಯ ಅರ್ಧಶತಕದ (56 ರನ್) ನೆರವಿನಿಂದ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ಆರ್ಸಿಬಿ ಗೆಲ್ಲಲು 145 ರನ್ ಗಳಿಸಬೇಕಿತ್ತು. ಗುರಿ ದೊಡ್ಡದಾಗಿರಲಿಲ್ಲ, ಆದರೆ ಆರ್ಸಿಬಿ ಬ್ಯಾಟ್ಸ್ಮನ್ಗಳು ರಾಜಸ್ಥಾನ ಬೌಲರ್ಗಳ ಮುಂದೆ ಮಂಡಿಯೂರಿ ನಿಂತರು. ಆರ್ಸಿಬಿ 19.3 ಓವರ್ಗಳಲ್ಲಿ 115 ರನ್ ಗಳಿಸಿ 29 ರನ್ಗಳಿಂದ ಸೋತಿತು.