ವಿಕೆಟ್-ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ಗೆ, ಪ್ರಸಕ್ತ ಐಪಿಎಲ್ ಅತ್ಯುತ್ತಮವಾಗಿದೆ. ಈ ಋತುವಿನಲ್ಲಿ ಅವರು RCB ಗಾಗಿ ದೊಡ್ಡ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಇಲ್ಲಿಯವರೆಗೆ 7 ಪಂದ್ಯಗಳನ್ನು ಆಡಿದ್ದು, 210 ರನ್ ಗಳಿಸಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಅವರ ಆಟದ ಬಲದಿಂದ ತಂಡ ಗೆಲುವು ದಾಖಲಿಸುತ್ತಿದೆ. ಇಲ್ಲಿಯವರೆಗೆ ಆಡಿದ 7 ಪಂದ್ಯಗಳಲ್ಲಿ ಚೆನ್ನೈ ವಿರುದ್ಧ ಮಾತ್ರ ಔಟ್ ಆಗಿದ್ದಾರೆ.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅವರು 14 ಎಸೆತಗಳಲ್ಲಿ 32 ರನ್ ಗಳಿಸಿದರು. ಆದರೆ ತಂಡವು ಇಲ್ಲಿ ಸೋಲನ್ನು ಕಂಡಿತು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 7 ಎಸೆತಗಳಲ್ಲಿ 14 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಮೂರನೇ ಪಂದ್ಯದಲ್ಲಿ ಅವರು 23 ಎಸೆತಗಳಲ್ಲಿ 44 ರನ್ ಗಳಿಸಿದರು. ಮುಂಬೈ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ 2 ಎಸೆತಗಳಲ್ಲಿ 7 ರನ್ ಗಳಿಸಿದ್ದರು. 5ನೇ ಪಂದ್ಯದಲ್ಲಿ ಚೆನ್ನೈ ವಿರುದ್ಧ 14 ಎಸೆತಗಳಲ್ಲಿ 34 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಅವರು ಮೊದಲ ಬಾರಿಗೆ ಔಟಾಗಿದ್ದರಿಂದ ಆರ್ಸಿಬಿ ತಂಡ ಸೋಲನುಭವಿಸಬೇಕಾಯಿತು. ಆರನೇ ಮತ್ತು ಏಳನೇ ಪಂದ್ಯಗಳಲ್ಲಿ ಅವರು ದೆಹಲಿ ಮತ್ತು ಲಖನೌ ವಿರುದ್ಧ ಕ್ರಮವಾಗಿ 66 ಮತ್ತು 13 ರನ್ ಗಳಿಸಿದರು.
ಕಾರ್ತಿಕ್ ಅವರ ಈ ಅತ್ಯುತ್ತಮ ಫಾರ್ಮ್ನಿಂದಾಗಿ, ಅವರನ್ನು ಟಿ 20 ವಿಶ್ವಕಪ್ಗೆ ಸೇರಿಸಿಕೊಳ್ಳುವ ಬಗ್ಗೆಯೂ ಚರ್ಚೆಗಳು ಪ್ರಾರಂಭವಾಗಿವೆ. ತಂಡಕ್ಕೆ ಮರಳಲು ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಅವರು ಸ್ವತಃ ಹೇಳಿದ್ದಾರೆ. ಅವರ ಅಮೋಘ ಪ್ರದರ್ಶನವನ್ನು ಕಂಡು ಆರ್ಸಿಬಿಯ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಕೂಡ ಹೊಗಳಿದ್ದಾರೆ. ಇದೇ ಫಾರ್ಮ್ನಲ್ಲಿ ಆಟ ಮುಂದುವರಿಸಿದರೆ ಆರ್ಸಿಬಿ ಈ ಬಾರಿ ಟ್ರೋಫಿ ಗೆಲ್ಲಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ, ಕಾರ್ತಿಕ್ ಬಗ್ಗೆ ಅವರು ತಮ್ಮ ಜೀವನದ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ದಿನೇಶ್ ಬ್ಯಾಟಿಂಗ್ ನೋಡಿ ಮತ್ತೆ ಕ್ರಿಕೆಟ್ ಆಡಬೇಕು ಎನಿಸುತ್ತಿದೆ ಎಂದರು. ಅವರ ಅದ್ಭುತ ಪ್ರದರ್ಶನದ ಫಲಿತಾಂಶವೇನೆಂದರೆ RCB ತಂಡ 7 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. RCB 10 ಅಂಕಗಳನ್ನು ಹೊಂದಿದ್ದು, ರನ್ ರೇಟ್ ಆಧಾರದ ಮೇಲೆ ಮೊದಲ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ಗೆ ಸಮನಾಗಿದೆ.