ಆತಿಥೇಯ ನ್ಯೂಜಿಲೆಂಡ್ ಇಂಗ್ಲೆಂಡ್ ಇಂಗ್ಲೆಂಡ್ ವಿರುದ್ಧ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದಲ್ಲಿ 1 ರನ್ಗಳ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ 1-1 ಸರಣಿ ಸಮಬಲ ಸಾಧಿಸಿದೆ.
ಫಾಲೋ ಆನ್ ಪಡೆದು ಗೆಲುವು ದಾಖಲಿಸಿದೆ ಮೂರನೆ ತಂಡ ನ್ಯೂಜಿಲೆಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಫಾಲೋ ಆನ್ ಪಡೆದು ಗೆಲುವು ದಾಖಲಿಸಿದ್ದು ಟೆಸ್ಟ್ ಕ್ರಿಕೆಟ್ನಲ್ಲಿ ಇದೆ ಮೊದಲಲ್ಲ.ಯಾವೆಲ್ಲಾ ತಂಡಗಳು ಫಾಲೋ ಆನ್ ಪಡೆದು ಗೆಲುವು ದಾಖಲಿಸಿದೆ ಅನ್ನೊ ವಿವರ ಇಲ್ಲಿದೆ.
1984ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ,ಇಂಗ್ಲೆಂಡ್ ನಡುವಿನ ಆಶಸ್ ಟೆಸ್ಟ್ ಸರಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 586 ರನ್ ಗಳಿಸಿತು. ಇಂಗ್ಲೆಂಡ್ 325 ರನ್ಗಳಿಗೆ ಆಲೌಟ್ ಆಯಿತು. ಫಾಲೋ ಆನ್ ಪಡೆದ ಇಂಗ್ಲೆಂಡ್ ಎರಡನೆ ಇನ್ನಿಂಗ್ಸ್ನಲ್ಲಿ 437 ರನ್ ಗಳಿಸಿತು. ಆಸ್ಟ್ರೇಲಿಯಾಕ್ಕೆ 177 ರನ್ ಗುರಿ ನೀಡಿತು. ಆಸ್ಟ್ರೇಲಿಯಾ ಇಂಗ್ಲೆಂಡ್ ದಾಳಿಗೆ ತತ್ತರಿಸಿ 166 ರನ್ ಗಳಿಗೆ ಆಲೌಟ್ ಆಯಿತು. ಆಂಗ್ಲರು 10 ರನ್ಗಳಂದ ಗೆದ್ದರು.
ಆಸಿಸ್ ವಿರುದ್ಧ ಮತ್ತೆ ಆಂಗ್ಲರಿಗೆ ಜಯ
1981ರಲ್ಲಿ ಇಂಗ್ಲೆಂಡ್ ಮತ್ತೆ ಆಸ್ಟ್ರೇಲಿಯಾ ವಿರುದ್ಧ ಫಾಲೋ ಆನ್ ಪಡೆದು ಮತ್ತೆ ಕ್ರಿಕೆಟ್ ಜಗತ್ತಿಗೆ ಅಚ್ಚರಿ ನೀಡಿತು. ಲೀಡ್ಸ್ ಮೈದಾನದಲ್ಲಿ ನಡೆದ ಆಶಸ್ ಸರಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 9 ವಿಕೆಟ್ ನಷ್ಟಕ್ಕೆ 401 ರನ್ ಗಳಿಸಿತು.ನಂತರ ಬ್ಯಾಟ್ ಮಾಡಿದ ಇಂಗ್ಲೆಂಡ್ 174 ರನ್ ಗಳಿಗೆ ಆಲೌಟ್ ಆಯಿತು. ಫಾಲೋ ಆನ್ ಪಡೆದ ಇಂಗ್ಲೆಂಡ್ 2ನೇ ಇನ್ನಿಂಗ್ಸ್ನಲ್ಲಿ 356 ರನ್ ಗಳಿಗೆ ಆಲೌಟ್ ಆಯಿತು.130 ರನ್ ಗುರಿ ಪಡೆದ ಆಸ್ಟ್ರೇಲಿಯಾ 111 ರನ್ ಗಳಿಗೆ ಸರ್ವ ಪತನ ಕಂಡಿತು.
2001 ಆಸ್ಟ್ರೇಲಿಯಾ ವಿರುದ್ಧ ಈಡನ್ ಅಂಗಳದಲ್ಲಿ ಇತಿಹಾಸ ಬರೆದ ಭಾರತ
ಈಡನ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 445 ರನ್ ಗಳಿಸಿತು. ಭಾರತ 171 ರನ್ ಗಳಿಗೆ ಆಲೌಟ್ ಆಯಿತು. ಫಾಲೋ ಆನ್ ಪಡೆದ ಭಾರತ ವಿವಿಎಸ್ ಲಕ್ಷ್ಮಣ್ (281 ರನ್) ಮತ್ತು ರಾಹುಲ್ ದ್ರಾವಿಡ್ (180ರನ್ ) ಅಮೋಘ ಜೊತೆಯಾಟ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 657 ರನ್ ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡಿತು. 384 ರನ್ ಗುರಿ ಪಡೆದ ಆಸ್ಟ್ರೇಲಿಯಾ 212 ರನ್ ಗಳಿಗೆ ಆಲೌಟ್ ಆಯಿತು.