ಭಾರತ ಪುರುಷರ ಹಾಕಿ ತಂಡ ಎಫ್ಐಎಚ್ ಪ್ರೊಲೀಗ್ನಲ್ಲಿ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ 3-2 ಗೋಲುಗಳ ಅಂತರದಿಂದ ಗೆದ್ದು ಆಘಾತ ನೀಡಿದೆ.
ವಿಶ್ವಕಪ್ ಸೋಲಿನ ಬಳಿಕ ಇದೇ ಮೊದಲ ಬಾರಿ ಭಾರತ ತಂಡ ಆಡುತ್ತಿದೆ.
ರೌರ್ಕೇಲಾದಲ್ಲಿ ನಡೆದ ಪಂದ್ಯದಲ್ಲಿ ಸ್ಟ್ರೈಕರ್ ಸುಖ್ಜೀತ್ ಸಿಂಗ್ 31 ಮತ್ತು 42ನೇ ನಿಮಿಷಗಳಲ್ಲಿ ಗೋಲು ಹೊಡೆದರು. ಸುಖ್ಜೀತ್ ಕಳೆದ ಜನವರಿಯಲ್ಲಿ ನಡೆದ ವಿಶ್ವಕಪ್ನಲ್ಲಿ ತಂಡದ ಭಾಗವಾಗಿದ್ದರು.
ನಾಯಕ ಹರ್ಮನ್ ಪ್ರೀತ್ ಸಿಂಗ್ ಪೆನಾಲ್ಟಿ ಅವಕಾಶದ ನೆರವಿನಿಂದ 30ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ಭಾರತ 42ನಿಮಿಷದವರೆಗೂ 3-0 ಗೋಲುಗಳಿಂದ ಪ್ರಾಬಲ್ಯ ಮೆರೆದಿತ್ತು. ಜರ್ಮನಿ ಪರ ಪೌಲ್ ಕೌಫ್ ಮಾನ್ (44ನೇ ನಿಮಿ),ಮತ್ತು ಮೈಕಲ್ ಸ್ಟ್ರತ್ ಆಫ್ (57ನೇ ನಿಮಿಷ) ಗೋಲುಗಳನ್ನ ಹೊಡೆದರು.
ನಾಳೆ ಭಾರತ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಸೋಮವಾರ ಎರಡನೆ ಲೆಗ್ನಲ್ಲಿ ಜರ್ಮನಿ ತಂಡವನ್ನು ಮತ್ತೆ ಎದುರಿಸಲಿದೆ.