FIH Pro League – ಭಾರತ ಪುರಷರ ತಂಡಕ್ಕೆ ಮನ್ ಪ್ರೀತ್ ಸಿಂಗ್ ಸಾರಥಿ
ಎಫ್ ಐಎಚ್ ಪ್ರೋ ಲೀಗ್ ಹಾಕಿ ಟೂರ್ನಿಗೆ ಭಾರತ ಪುರುಷರ ಹಾಕಿ ತಂಡವನ್ನು ಪ್ರಕಟಿಸಲಾಗಿದೆ. ಭಾರತ ತಂಡವನ್ನು ಸ್ಟಾರ್ ಮಿಡ್ ಫೀಲ್ಡರ್ ಹಾಗೂ ಒಲಿಂಪಿಯನ್ ಮನ್ ಪ್ರೀತ್ ಸಿಂಗ್ ಅವರು ಮುನ್ನಡೆಸಲಿದ್ದಾರೆ. ಹರ್ಮನ್ ಪ್ರೀತ್ ಸಿಂಗ್ ಅವರು ಉಪನಾಯಕನಾಗಿದ್ದಾರೆ.
ಫೆಬ್ರವರಿ 8 ಮತ್ತು 13ರಂದು ಭಾರತ ತಂಡ ದಕ್ಷಿಣ ಆಫ್ರಿಕಾ ಮತ್ತು ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಈ ಎರಡು ಪಂದ್ಯಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಭಾರತ ತಂಡ ಆಡಲಿದೆ.
ತಂಡದಲ್ಲಿ 14 ಮಂದಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಆಡಿದ್ದ ಆಟಗಾರರು ಸ್ಥಾನ ಕಾಯ್ದುಕೊಂಡಿದ್ದಾರೆ. ತಂಡದಲ್ಲಿ ಯುವ ಡ್ರ್ಯಾಗ್ ಫ್ಲಿಕರ್ ಜುಗ್ರಾಜ್ ಸಿಂಗ್ ಜುಗ್ರಾಜ್ ಸಿಂಗ್ ಮತ್ತು ಸ್ಟ್ರೈಕರ್ ಅಭಿಷೇಕ್ ಅವರು ತಂಡದ ಹೊಸ ಮುಖಗಳಾಗಿದ್ದಾರೆ. ಮೂರು ವಾರಗಳ ಕಾಲ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಶಿಬಿರ ನಡೆಸಿದ ಬಳಿಕ ತಂಡವನ್ನು ಆಯ್ಕೆ ಮಾಡಲಾಗಿದೆ.
FIH Pro League – Manpreet to lead India
ಭಾರತ ಪುರುಷರ ಹಾಕಿ ತಂಡ
ಗೋಲು ಕೀಪರ್ ಗಳು – ಪಿ.ಆರ್. ಶ್ರೀಜೇಶ್ , ಕ್ರಿಶನ್ ಬಹದ್ದೂರ್ ಪಠಾಕ್
ಡಿಫೆಂಡರ್ಸ್ – ಹರ್ಮನ್ ಪ್ರೀತ್ ಸಿಂಗ್ (ಉಪನಾಯಕ), ಅಮಿತ್ ರೋಹಿದಾಸ್, ಸುರೇಂದರ್ ಕುಮಾರ್, ವರುಣ್ ಕುಮಾರ್, ಜರ್ಮನ್ ಪ್ರೀತ್ ಸಿಂಗ್, ಜುಗ್ರಾಜ್ ಸಿಂಗ್.
ಮಿಡ್ ಫೀಲ್ಡರ್ಸ್ – ಮನ್ ಪ್ರೀತ್ ಸಿಂಗ್ (ನಾಯಕ), ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್, ಜಸ್ಕರನ್ ಸಿಂಗ್, ಶಂಶೀರ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್.
ಫಾವಡ್ರ್ಸ್- ಮನ್ ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಯ, ಆಕಾಶ್ ದೀಪ್ ಸಿಂಗ್, ಶೀಲಾನಂದ್ ಲಾಕ್ರಾ, ದಿಲ್ ಪ್ರೀತ್ ಸಿಂಗ್. ಅಭಿಷೇಕ್
ಹೆಚ್ಚುವರಿ ಆಟಗಾರರು – ಸೂರಜ್ ಕರ್ಕೆರ, ಮನ್ ದೀಪ್ ಮೋರ್, ರಾಜ್ ಕುಮಾರ್ ಪಾಲ್, ಸುಮಿತ್, ಗುರ್ಶಹಿಬಿತ್ ಸಿಂಗ್.
Goalkeepers: P R Sreejesh, Krishan Bahadur Pathak.
Defenders: Harmanpreet Singh (Vice-captain), Amit Rohidas, Surender Kumar, Varun Kumar, Jarmanpreet Singh, Jugraj Singh.
Midfielders: Manpreet Singh (Captain), Nilakanta Sharma, Hardik Singh, Jaskaran Singh, Shamsher Singh, Vivek Sagar Prasad.
Forwards: Mandeep Singh, Lalit Kumar Upadhyay, Akashdeep Singh, Shilanand Lakra, Dilpreet Singh, Abhishek.
Standbys: Suraj Karkera, Mandeep Mor, Raj Kumar Pal, Sumit, Gursahibjit Singh