ಅತ್ಯದ್ಭುತ ಪ್ರದರ್ಶನ ಮುಂದುವರೆಸಿರುವ ಭಾರತ ಪುರುಷರ ಹಾಕಿ ತಂಡ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ 6-3 ಗೋಲುಗಳಿಂದ ಗೆದ್ದು ಬೀಗಿದೆ. ಎಐಐಎಚ್ ಪ್ರೊ ಲೀಗ್‍ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಸಿದೆ.
ಇಲ್ಲಿನ ಬಿರ್ಸಾ ಮುಂಡಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ಪರ ಜುಗ್‍ರಾಜ್ ಸಿಂಗ್ (21ನೇ ನಿಮಿ), ಅಭಿಷೇಕ್ (22, 51ನೇ ನಿಮಿ0, ಸೆಲ್ವಂ ಕಾರ್ತಿ(24, 46ನೇ ನಿಮಿಷ), ನಾಯಕ ಹರ್ಮನ್‍ಪ್ರೀತ್ ಸಿಂಗ್ (26ನೇ ನಿಮಿಷ), ಗೋಲುಗಳನ್ನು ಹೊಡೆದರು.
ಜರ್ಮನಿ ಪರ ಗೋನ್ಜಾಲೊ (23ನೇ ನಿಮಿಷ), ಮಾಲ್ಟೆ ಹೆಲ್‍ವಿಹ್ (31ನೇ ನಿಮಷ) ಗೋಲು ಗಳನ್ನು ಹೊಡೆದರು. ಮೊನ್ನೆಯಷ್ಟೆ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ ಗೆದ್ದು ಬೀಗಿತ್ತು. ನಂತರ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತ್ತು.