ಅಮೋಘ ಪ್ರದರ್ಶನ ಮುಂದುವರೆಸಿರುವ ಭಾರತ ಪುರುಷರ ಹಾಕಿ ತಂಡ ಎಫ್ಐಎಚ ಪ್ರೊ ಲೀಗ್ನಲ್ಲಿ ಆತಿಥೇಯ ಗ್ರೇಟ್ ಬ್ರಿಟನ್ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ 4-2 ಗೋಲುಗಳಿಂದ ಗೆಲುವು ಸಾಧಿಸಿತು.
ಶನಿವಾರ ನಡೆದ ಎರಡನೆ ಲೆಗ್ನ ಜಿದ್ದಾಜಿದ್ದಿನ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಉಭಯ ತಂಡಗಳು 4-4 ಗೋಲುಗಳನ್ನು ಹೊಡೆದು ಸಮಬಲ ಸಾಸಿದವು. ನಂತರ ನಡೆದ ಪೆನಾಲ್ಟಿ ಶೂಟೌಟ್ನಲ್ಲಿ ಭಾರತ ರೋಚಕವಾಗಿ ಗೆದ್ದು ಬೋನಸ್ ಅಂಕ ಪಡೆಯಿತು . ಜತೆಗೆ ಸೋಲಿನ ಸೇಡನ್ನು ತೀರಿಸಿಕೊಂಡಿತು.
ನಾಯಕ ಹರ್ಮನ್ಪ್ರೀತ್ (7ನೇ ನಿಮಿಷ), ಮಂದೀಪ್ ಸಿಂಗ್ (19ನೆ ನಿಮಿ), ಸುಕ್ಜೀತ್ ಸಿಂಗ್ (28ನೇ ನಿಮಿಷ),ಅಭಿಷೇಕ್ (50ನೇ ನಿಮಿಷ) ಗೋಲುಗಳನ್ನು ಹೊಡೆದರು.
ಗ್ರೇಟ್ ಬ್ರಿಟನ್ ಪರ ಸಾಮ್ ವಾರ್ಡ್ (8, 40, 47,53ನೇ ನಿಮಿಷ) ಗೋಲುಗಳನ್ನು ಹೊಡೆದು ಮಿಂಚಿದರು.
ಈ ಗೆಲುವಿನೊಂದಿಗೆ ಭಾರತ ಬೋನಸ್ ಅಂಕವನ್ನು ಪಡೆದಿದೆ. ಆದೆರ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲೇ (12 ಪಂದ್ಯ, 24 ಅಂಕ) ಉಳಿದಿದೆ. ಗ್ರೇಟ್ ಬ್ರಿಟನ್ 11 ಪಂದ್ಯಗಳಿಂದ 26 ಅಂಕ ಪಡೆದು ಅಗ್ರಸ್ಥಾನದಲ್ಲಿದೆ.
ಎಫ್ಐಎಚ್ ಪ್ರೊ ಹಾಕಿ ಯೂರೋಪ್ ಲೆಗ್ನಲ್ಲಿ ಭಾರತ ಹಾಕಿ ತಂಡ ಜೂ.7ರಂದು ಆತಿಥೇಯ ನೆದರ್ಲ್ಯಾಂಡ್ ವಿರುದ್ಧ ಸೆಣಸಲಿದೆ.